ಬೆಂಗಳೂರು: ನಾನೇನು ಕಳ್ಳಿಯಲ್ಲ. ಕ್ರಿಮಿನಲ್‍ಗಳ ಥರ ನನ್ನ ಜೀಪಲ್ಲಿ ಕರೆದುಕೊಂಡು ಹೋಗ್ತೀರಾ.. ನಾನು ಜೀಪು ಹತ್ತಲ್ಲ. ಜೈಲಿಗೆ ಎಷ್ಟು ದೂರು ಇದ್ರೂ ನಡೆದುಕೊಂಡೇ ಹೋಗ್ತೇನೆ.. ಹೀಗಂತ, ಪೊಲೀಸರ ಮುಂದೆ ಶಶಿಕಲಾ ನಟರಾಜನ್ ಹೇಳಿದ್ದಾರೆ.ಬುಧವಾರ ಪರಪ್ಪನ ಅಗ್ರಹಾರಕ್ಕೆ ಬಂದಾಗ ಶಶಿಕಲಾರನ್ನ ಪೊಲೀಸರು ಜೈಲಿನ ಆವರಣದಿಂದ ಬಂಧಿಖಾನೆಗೆ ಕರೆದುಕೊಂಡು ಹೋಗಲು ಜೀಪು ಹತ್ತುವಂತೆ ಹೇಳಿದ್ರು. ಆದ್ರೆ, ಜೀಪಲ್ಲಿ ಹೋಗೋಕೆ ನಾನೇನು ಜುಜುಬಿ ಕಳ್ಳಿಯಲ್ಲ ಎಂದು ಹೇಳಿರುವ ವಿಚಾರವನ್ನು ಪೊಲೀಸ್ ಮೂಲಗಳು ತಿಳಿಸಿವೆ.ಶುಕ್ರವಾರ ಬೆಳಗ್ಗೆ ಜೈಲಿನಲ್ಲಿ ವ್ಯಾಯಾಮ ಮಾಡಿದ ಬಳಿಕ ಚಿನ್ನಮ್ಮ, ಟೊಮೆಟೋ ಬಾತ್ ಸೇವಿಸಿದ್ದಾರೆ. ಅಲ್ಲದೆ, ಸಿಎಂ ಪಳನಿಸ್ವಾಮಿ ಜೈಲಿಗೆ ಭೇಟಿ ನೀಡಿದಾಗ ಸೂಕ್ಷ್ಮ ವಿಚಾರಗಳನ್ನ ಮಾತಾಡಲು ಪ್ರತ್ಯೇಕ ಕೋಣೆ ಕಲ್ಪಿಸುವಂತೆ ಜೈಲಾಧಿಕಾರಿಗೆ ಮನವಿ ಮಾಡಿದ್ದಾರೆ.ಶನಿವಾರ ಪಳನಿಸ್ವಾಮಿ ವಿಶ್ವಾಸ ಮತ ಗೆದ್ದರೆ ಭಾನುವಾರ ಅಥವಾ ಸೋಮವಾರ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡೋ ಸಾಧ್ಯತೆಯಿದೆ ಅಂತ ಎಐಎಡಿಎಂಕೆ ರಾಜ್ಯ ಘಟಕದ ಅಧ್ಯಕ್ಷ ಪುಗಳೇಂದಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.Sign in to your account
Username or Email Address


Password

 Remember Me


