ಕಲಬುರಗಿ: ಬಾವಿಗೆ ಬಿದ್ದು ತಾಯಿ ಮತ್ತು ಮಗಳು ಮೃತಪಟ್ಟಿರುವ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ರಟಕಲ್ ಗ್ರಾಮದಲ್ಲಿ ನಡೆದಿದೆ.ಮೃತ ದುರ್ದೈವಿಗಳು ಹೋಡೆಬೀರನಹಳ್ಳಿ ಗ್ರಾಮದ ಅಂಬಿಕಾ ಜಮಾದಾರ ಮತ್ತು ಆಕೆಯ ಮಗಳಾದ ಚೆನ್ನಮ್ಮಾ ಎಂದು ಗುರುತಿಸಲಾಗಿದೆ. ಮುಖ ತೊಳೆಯಲು ಹೋಗಿ ಬಾಲಕಿ ಚೆನ್ನಮ್ಮಾ ಕಾಲು ಜಾರಿ ಬಾವಿಗೆ ಬಿದ್ದಿದಾಳೆ. ಆಕೆಯನ್ನು ರಕ್ಷಿಸಲು ಹೋದ ತಾಯಿ ಸಹ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.ಈ ಕುರಿತು ರಟಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Sign in to your account
Username or Email Address


Password

 Remember Me


