– 16.70 ಲಕ್ಷ ರೂಪಾಯಿ ಹಳೆಯ ನೋಟು, ಒಂದು ಕಾರು ಜಪ್ತಿರಾಯಚೂರು: ರದ್ದಾಗಿರುವ 500, 1000 ಮುಖಬೆಲೆಯ ನೋಟುಗಳ ವಿನಿಮಯ ಮಾಡುತ್ತಿದ್ದ ಮೂವರು ದಂಧೆಕೋರರನ್ನು ರಾಯಚೂರು ಪೊಲೀಸರು ಬಂಧಿಸಿದ್ದಾರೆ.ನಗರದ ಪಶ್ಚಿಮ ಠಾಣೆ ಪೊಲೀಸರ ಕಾರ್ಯಾಚರಣೆಯಲ್ಲಿ ಮೂರು ಜನ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಧಾರವಾಡ ಮೂಲದ ರವಿಕುಮಾರ್, ರಾಯಚೂರಿನ ಅನ್ವರ್, ಮಾನ್ವಿಯ ಪರಶುರಾಮ ನೋಟು ವಿನಿಮಯ ವೇಳೆ ಸಿಕ್ಕಿಬಿದ್ದ ಆರೋಪಿಗಳು. ಬಂಧಿತರಿಂದ ಒಟ್ಟು 16 ಲಕ್ಷ 70 ಸಾವಿರ ರೂಪಾಯಿ ಹಳೆಯ ನೋಟುಗಳನ್ನ ಜಪ್ತಿ ಮಾಡಲಾಗಿದೆ. ಇದರಲ್ಲಿ 3 ಲಕ್ಷ 82 ಸಾವಿರ ರೂಪಾಯಿ ಸಾವಿರ ರೂಪಾಯಿ ಮುಖಬೆಲೆಯ ನೋಟು, 12 ಲಕ್ಷ 88 ಸಾವಿರ ರೂಪಾಯಿ 500 ರೂಪಾಯಿ ಮುಖಬೆಲೆಯ ನೋಟುಗಳಾಗಿವೆ.ರಾಯಚೂರಿನ ಮಂತ್ರಾಲಯ ರಸ್ತೆಯ ಅತಿಥಿ ಹೋಟೆಲ್ ಎದುರು ಆರೋಪಿಗಳು ಹಣ ವಿನಿಮಯಕ್ಕೆ ಮುಂದಾಗಿದ್ದರು. ದಾಳಿ ವೇಳೆ ಪೊಲೀಸರು ಆರೋಪಿಗಳ ಕಾರನ್ನೂ ಜಪ್ತಿ ಮಾಡಿದ್ದಾರೆ. ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ. Sign in to your account
Username or Email Address


Password

 Remember Me


