ಬೆಂಗಳೂರು: ಬಾಹುಬಲಿ 2 ಕನ್ನಡಕ್ಕೆ ಡಬ್ ಆಗಬೇಕೆಂದು ಆಗ್ರಹಿಸಿ ಟ್ವಿಟ್ಟರ್‍ನಲ್ಲಿ ಕನ್ನಡಿಗರು ಆಗ್ರಹಿಸಿದ್ದಾರೆ.ಕನ್ನಡ ಗ್ರಾಹಕ ವೇದಿಕೆಯವರು ಆಯೋಜಿಸಿದ ಈ ಅಭಿಯಾನಕ್ಕೆ ಜನ ಬೆಂಬಲ ವ್ಯಕ್ತಪಡಿಸುತ್ತಿದ್ದು,  #Bahubali2InKannada ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡುತ್ತಿದ್ದಾರೆ. ಸಂಜೆ 6.30ಕ್ಕೆ ಆರಂಭವಾದ ಈ ಆಂದೋಲನ ಬೆಂಗಳೂರಿನಲ್ಲಿ ಟ್ರೆಂಡಿಂಗ್ ಟಾಪಿಕ್ ಆಗಿದೆ.ರಾಜಮೌಳಿ ನಿರ್ದೇಶನದ ತೆಲುಗು, ತಮಿಳು, ಮಲೆಯಾಳಂ, ಹಿಂದಿ ಭಾಷೆಯಲ್ಲಿ ಮೂಡಿ ಬರಲಿರುವ ಬಾಹುಬಲಿ2 ಏಪ್ರಿಲ್ 28ರಂದು ಬಿಡುಗಡೆಯಾಗಲಿದೆ.ಜನರ ಕೆಲ ಟ್ವೀಟ್ ಗಳನ್ನು ಇಲ್ಲಿ ನೀಡಲಾಗಿದೆ
– ಕನ್ನಡಿಗರು ಕರ್ನಾಟಕದಲ್ಲಿ ಕನ್ನಡ ಬಿಟ್ಟು ಬೇರೆ ಭಾಷೆಯಲ್ಲಿ ಬಾಹುಬಲಿ ಚಿತ್ರ ನೋಡುವುದು ಹೇಗೆ? ಕನ್ನಡದಲ್ಲೆ ಬಂದರೆ ನಮಗೆಲ್ಲರಿಗೂ ಸುಲಭವಾಗಿ ಅರ್ಥವಾಗುತ್ತದೆ.– ಡಬ್ಬಿಂಗ್ ನಿಂದಾಗಿ ಇಂಡಸ್ಟ್ರಿ ಹಾಳಾಗುತ್ತದೆ ಎನ್ನುವುದಾದರೆ ತಮಿಳು, ತೆಲುಗು ಇಂಡಸ್ಟ್ರಿ ಇಷ್ಟರೊಳಗೆ ನೆಲಕಚ್ಚಬೇಕಿತ್ತು. ಹೀಗಾಗಿ ಕನ್ನಡಕ್ಕೆ ಡಬ್ಬಿಂಗ್ ಬೇಕು.– ಕನ್ನಡ ನಾಡಿನಲ್ಲಿ ಮನರಂಜನೆ ಕನ್ನಡದಲ್ಲೇ ಸಿಗುವ ಹೆಜ್ಜೆಯಾಗಿ ಬಾಹುಬಲಿ ಕನ್ನಡಕ್ಕೆ ಡಬ್ ಆಗಿ ಬರಲಿ.– ಇಡೀ ಕರ್ನಾಟಕ ಏನ್ ನೋಡಬೇಕು, ಏನ್ ನೋಡಬಾರದು ಎಂದು ನಿರ್ಧಾರ ಮಾಡಲು ಇವರು ಯಾರು?– ಬಾಹುಬಲಿ ನಿರ್ದೇಶಕ ರಾಜಮೌಳಿ ಕನ್ನಡಿಗರು, ಸುದೀಪ್ ಅಸ್ಲಂ ಖಾನ್ ಪಾತ್ರ ಮಾಡಿದ್ದಾರೆ. ಅನುಷ್ಕಾ ಶೆಟ್ಟಿ ಮಂಗಳೂರಿನವರು. ಸಿನಿಮಾದ ಆಡಿಯೋ ಹಕ್ಕನ್ನು ಲಹರಿ ಸಂಸ್ಥೆ ಖರೀದಿಸಿದೆ. ಕನ್ನಡಿಗರೇ ಚಿತ್ರದಲ್ಲಿ ಕೆಲಸ ಮಾಡಿರುವಾಗ ಕನ್ನಡದಲ್ಲಿ ಬಾಹುಬಲಿ ಬಂದರೆ ಸಮಸ್ಯೆ ಏನು?#Bahubali2InKannada demand gets bigger day by day. This Thursday let us all join hands and demand for #Kannada dubbed version of this movie. pic.twitter.com/DIip4mj9oD— KGK (@KannadaGrahaka) February 14, 2017Many Kannadigas have worked for @BaahubaliMovie. @KannadaGrahaka would love to watch them on screen speaking #Kannada in #Bahubali2InKannada pic.twitter.com/XqbobbDZBx— Jayanth Sidmallappa (@Bond_Jay_Bond) February 16, 2017ಡಬ್ಬಿಂಗ್ ಇಂದ ಇಂಡಸ್ಟ್ರಿ ಹಾಳಾಗುತ್ತೆ ಅನ್ನವುದಾದರೆ ತಮಿಳು, ತೆಲುಗು ಇಂಡಸ್ಟ್ರಿ ಇಷ್ಟರೊಳಗೆ ನೆಲಕ್ಕಚ್ಚಬೇಕಿತ್ತು!ಅಲ್ಲವೇ? ಡಬ್ಬಿಂಗ್ ಬೇಕು #Bahubali2InKannada— Naresh Bhat (@Nareshbhat07) February 16, 2017#DubbingInKannada is one of the many registers as part of language planning. Let it become mainstream. #Bahubali2InKannada https://t.co/myCltXHfHt— Babu Ajay (@Babuajay316) February 16, 2017ಹಣ ಕೊಟ್ಟ ಮೇಲೆ ನಾನೇನು ನೋಡಬೇಕು ನೋಡಬಾರದು ಕೊನೆಗೆ ನನ್ನಂತಹ ಎಲ್ಲಾ ಬಳಕೆದಾರರ ಹಕ್ಕು.ಮಾತುಹಚ್ಚಿಕೆ ನನ್ನ ಹಕ್ಕು,ಎಲ್ಲಾದು ಕನ್ನಡದಲ್ಲಿ ಬರಲಿ #Bahubali2InKannada pic.twitter.com/9CUvkM8p10— Vivek Shankar (@vivek_shankar15) February 16, 2017Sign in to your account
Username or Email Address


Password

 Remember Me


