ಬೆಂಗಳೂರು: ಹೊಸ ಎರಡು ಸಾವಿರ ನೋಟ್ ಹಿಡ್ಕೊಂಡು, ಫೇಸ್ ಬುಕ್, ವಾಟ್ಸಪ್‍ನಲ್ಲಿ ಪೋಸ್ ಕೊಟ್ಟಿದ ದಿನಗಳು ಮುಗಿದು, ಎಲ್ಲರ ಕೈಯಲ್ಲಿ ದುಡ್ಡು ಓಡಾಡೋಕೆ ಶುರುವಾದರೂ ಎರಡು ಸಾವಿರ ರೂಪಾಯಿ ಕ್ರೇಜ್ ಮಾತ್ರ ಇನ್ನು ಕಮ್ಮಿಯಾಗಿಲ್ಲ. ಅದಕ್ಕೆ ಅನಿಸುತ್ತೆ ಇಲ್ಲೊಂದು ನವ ಜೋಡಿ ತಮ್ಮ ಮದುವೆಗೆ ಎರಡು ಸಾವಿರ ರೂಪಾಯಿ ವಿನ್ಯಾಸ ಹೊಸ ಪಿಂಕ್ ನೋಟ್ ಹಂಚುತ್ತಿದ್ದಾರೆ.ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಶ್ವೇತಾ ಮತ್ತು ಅಶೋಕ್ ಎರಡು ಸಾವಿರ ರೂ. ಮುಖಬೆಲೆಯ ನೋಟಿನ ವಿನ್ಯಾಸದಲ್ಲಿ ಮದುವೆ ಆಹ್ವಾನ ಪತ್ರಿಕೆಯನ್ನು ತಯಾರಿಸಿದ್ದಾರೆ. ಸ್ನೇಹಿತರನ್ನು, ಬಂಧುಗಳನ್ನು ಈ ನೋಟ್ ಆಕರ್ಷಿಸುತ್ತಿದ್ದು, ಹೊಸ ಟ್ರೆಂಡ್‍ಗೆ ಫಿದಾ ಆಗಿದ್ದಾರೆ. ಒಂದು ಆಹ್ವಾನ ಪತ್ರಿಕೆ ಕೊಟ್ರೆ ಮತ್ತೊಂದು ಕೊಡಿ ಅಂತ ಕೇಳಿ ಕೇಳಿ ಪಡೆಯುತ್ತಿದ್ದಾರೆ ಎಂದು ವಧು ಶ್ವೇತಾ ಹೇಳುತ್ತಾರೆ.ನೋಟಿನ ಬಣ್ಣ ಬಿಟ್ರೆ ಮತ್ಯಾವುದೇ ಪ್ರಿಂಟ್‍ಗಳನ್ನು ಬಳಸಿಕೊಂಡಿಲ್ಲ. ಸದ್ಯ ಈಗ ಈ ನೋಟಿನ ವಿನ್ಯಾಸದ ಆಹ್ವಾನ ಪತ್ರಿಕೆಗೆ ಬೇಡಿಕೆ ಹೆಚ್ಚಾಗುತ್ತಿದೆ ಎಂದು ಮುದ್ರಣ ಸಂಸ್ಥೆಯ ರಮೇಶ್ ಹೇಳಿದ್ದಾರೆ. Sign in to your account
Username or Email Address


Password

 Remember Me


