ಬೀದರ್: ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ನಾಲ್ವರು ದುಷ್ಕರ್ಮಿಗಳು ಇಬ್ಬರು ಸಹೋದರರನ್ನು ಕೊಲೆ ಮಾಡಿದ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಲಚ್ಚರ್ ಕಾಲೋನಿಯಲ್ಲಿ ನಡೆದಿದೆ. 32 ವರ್ಷದ ಇಬ್ರಾಹಿಮ್ ಮತ್ತು 26 ವರ್ಷದ ಹುಸೇನ್ ಕೊಲೆಯಾದ ದುರ್ದೈವಿ ಸಹೋದರರು. 43 ವರ್ಷದ ಅಲಾಶ್, 30 ವರ್ಷದ ದಸ್ತಗೀರ್, 24 ವರ್ಷದ ತೌಫಿಕ್ ಮತ್ತು 37 ವರ್ಷದ ಸದ್ದಾಂ ಕೊಲೆ ಮಾಡಿದ ಆರೋಪಿಗಳು. ಈ ನಾಲ್ವರು ಆರೋಪಿಗಳು ಭಾಲ್ಕಿ ನಗರ ಠಾಣೆಯಲ್ಲಿ ಶರಣಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.2013ರಲ್ಲಿ ಆರೋಪಿಗಳ ಮೇಲೆ ಇಂದು ಕೊಲೆಯಾದ ಸಹೋದರರು ಹಲ್ಲೆ ನಡೆಸಿದ್ರು. ಇದೇ ವೈಷಮ್ಯಕ್ಕೆ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ.ಈಗಾಗಲೇ ಸ್ಥಳಕ್ಕೆ ಎಸ್.ಪಿ ಪ್ರಕಾಶ್ ನಿಕ್ಕಂ ಭೇಟಿ ನೀಡಿ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದು, ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ. ಈ ಕುರಿತು ಭಾಲ್ಕಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


