ಬೆಂಗಳೂರು: ಹಾಗೂ ಹೀಗೂ ತನ್ನ ಬಂಟನನ್ನ ಅಧಿಕಾರಕ್ಕೆ ತಂದ ಶಶಿಕಲಾ ಅಲಿಯಾಸ್ ಚಿನ್ನಮ್ಮ ತನ್ನಾಸೆಯಂತೆಯೇ ತನ್ನ ಮುಂದೆಯೇ ಅನಧಿಕೃತವಾಗಿಯಾದ್ರೂ ಸಚಿವ ಸಂಪುಟ ಸಭೆ ನಡೆಸೋ ಪ್ಲಾನ್ ಮಾಡಿದ್ದಾರೆ. ಆದ್ರೆ, ಸಿಎಂ ಆಗೋ ಕನಸು ಅರಳುವ ಮುನ್ನವೇ ಕಮರಿ ಹೋಗಿರೊದ್ರಿಂದ ಚಿನ್ನಮ್ಮ ಮತ್ತೊಂದು ಪ್ಲಾನ್ ಮಾಡಿದ್ದಾರೆ. ಅದು ಬೇರೇನೂ ಅಲ್ಲ ಪೆರೋಲ್ ಪ್ಲಾನ್.ಮೊನ್ನೆಯಷ್ಟೇ ಜೈಲು ಸೇರಿರೋ ಶಶಿಕಲಾ ರಾಜಕೀಯ ದಾಳವನ್ನ ಜೈಲಿನಲ್ಲಿಯೇ ಕುಳಿತು ಉರುಳಿಸ್ತಾ ಇದ್ದಾರೆ. ಇನ್ನು ಪಗಡೆಯಾಗಿರೋ ಪಳನಿಸ್ವಾಮಿ ಅಂಡ್ ಗ್ಯಾಂಗ್ ಚಿನ್ನಮ್ಮನ ಮಾತನ್ನ ಕೇಳಿಯೇ ಸರ್ಕಾರ ನಡೆಸೋದು ಎಲ್ಲರಿಗೂ ಗೊತ್ತಿರೋ ವಿಚಾರ. ಆದ್ರೆ ಶಶಿಕಲಾ ಜೈಲಿನಲ್ಲಿಯೇ ಕುಳಿತು ಆಟ ಆಡೋದಕ್ಕೆ ಇಷ್ಟ ಪಟ್ಟಂತಿಲ್ಲ. ಕಣ್ಣ ಮುಂದೆಯೇ ಸರ್ಕಾರ ನಡೆಸಬೇಕು ಅಂದುಕೊಂಡಿರೋದ್ರಿಂದ ಶಶಿಕಲಾ ಹತ್ತು ದಿನ ಕಳೆದ ಬಳಿಕ ಅನಾರೋಗ್ಯದ ನೆಪ ಹೇಳಿ ಜೈಲಾಧಿಕಾರಿಯ ಮುಂದೆ ಪೆರೋಲ್ ಕೇಳುವ ಎಲ್ಲಾ ಲಕ್ಷಣಗಳೂ ಇದೆ.ಸಂಜಯ್ ದತ್ತ್ ಪ್ಲಾನ್ ಫಾಲೋ?!: ಸುಪ್ರೀಂ ಕೋರ್ಟ್ ಅನಿರೀಕ್ಷಿತವಾಗಿ ಆದೇಶವನ್ನು ನೀಡ್ತು. ಮೊದ್ಲೇ ನಾನು ಅನಾರೋಗ್ಯದಲ್ಲಿ ಇದ್ದೆ. ತಯಾರಿ ಮಾಡಿಕೊಳ್ಳುವ ಸಲುವಾಗಿ ನಾಲ್ಕು ವಾರ ಗಡವು ಕೇಳಿದ್ರೂ ಕೋರ್ಟ್ ನಿರಾಕರಣೆ ಮಾಡಿದ್ರಿಂದ ಪೆರೋಲ್ ನೀಡುವಂತೆ ಜೈಲಾಧಿಕಾರಿಗೆ ಚಿನ್ನಮ್ಮ ಮನವಿ ಮಾಡಿಕೊಳ್ಳಲಿದ್ದಾರೆ. ಜೈಲಾಧಿಕಾರಿಗಳು ಚೆನ್ನೈನ ಜಿಲ್ಲಾಧಿಕಾರಿಗೆ ಪತ್ರ ಬರೆದು ಶಶಿಕಲಾಗೆ ಪೆರೋಲ್ ನೀಡೋದ್ರಿಂದ ತೊಂದರೆಯಾಗೋಲ್ವಾ ಅಂತ ವರದಿಯನ್ನು ತರಿಸಿಕೊಂಡು ಬಳಿಕ ಶಶಿಕಲಾಗೆ ಪೆರೋಲ್ ನೀಡುವ ಸಾಧ್ಯತೆಗಳಿವೆ. ಈ ಹಿಂದೆ ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಕಾರಣ ಜೈಲು ಪಾಲಾಗಿದ್ದ ಸಂಜಯ್ ದತ್ ಕೂಡ ಇದೇ ಪ್ಲಾನ್ ಮಾಡಿ ಜೈಲಿನಿಂದ ಹೊರಬಂದಿದ್ರು.ಜೈಲಿಗೆ ಬರೋವಾಗ ರೋಡ್ ಶೋ ಮಾಡಿ ಬಂದ ಶಶಿಕಲಾ ಪೆರೋಲ್ ಸಿಕ್ರೆ ಈ ಎಲ್ಲಾ ಅವಕಾಶಗಳಿಗೂ ಬ್ರೇಕ್ ಹಾಕಿ ವಿಶೇಷ ವಿಮಾನದಲ್ಲಿ ಚೆನ್ನೈಗೆ ಪ್ರಯಾಣ ಬೆಳಸೋ ಸಾಧ್ಯತೆಗಳಿವೆ. ಇನ್ನೊಂದು ಹತ್ತು ದಿನದ ಒಳಗೆ ಶಶಿಕಲಾ ತನ್ನ ಕಣ್ಣು ಮುಂದೆಯೇ ಅಧಿಕಾರ ನಡೆಸೋ ಎಲ್ಲಾ ಪ್ಲಾನ್ ಮಾಡಿಕೊಂಡಿದ್ದಾರೆ.Sign in to your account
Username or Email Address


Password

 Remember Me


