ಕೊಪ್ಪಳ: ವಿಚಾರಣೆಗಾಗಿ ಕರೆತಂದ ಆರೋಪಿ ಪೊಲೀಸ್ ಠಾಣೆಯಿಂದ ಪರಾರಿಯಾಗಿರುವ ಘಟನೆ ಕೊಪ್ಪಳ ತಾಲೂಕಿನ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ನಡೆದಿದೆ.ಹುಲಿಗಿ ಗ್ರಾಮದಲ್ಲಿ ಪೊಲಿಸರೊಂದಿಗೆ ಗಲಾಟೆ ಮಾಡಿಕೊಂಡಿದ್ದ ಹುಲಗಪ್ಪ (32) ಎನ್ನುವ ವ್ಯಕ್ತಿ ಪರಾರಿಯಾದ್ದಾನೆ. ಈತ ಗಲಾಟೆ ಮಾಡಿಕೊಂಡು ಪೊಲೀಸೊಬ್ಬರಿಗೆ ಚಪ್ಪಲಿಯಿಂದ ಹೊಡೆದಿದ್ದ. ಈ ವಿಷಯಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಠಾಣೆಗೆ ಕರೆತರಲಾಗಿತ್ತು. ಈ ಸಂದರ್ಭದಲ್ಲಿ ಸಂಬಂಧಿಯೊಂದಿಗೆ ಮಾತನಾಡುತ್ತ ಕುಳಿತಿದ್ದ ಹುಲಗಪ್ಪ ಪ್ರಕರಣ ದಾಖಲಾಗುತ್ತದೆ ಎಂದು ಗೊತ್ತಾಗುತ್ತಲೇ ಠಾಣೆಯಿಂದ ಓಡಿ ಹೋಗಿದ್ದಾನೆ.ಫೋಲೀಸರು ಬೆನ್ನಟ್ಟಿದರೂ ಕೂಡಾ ಕೈಗೆ ಸಿಗದೇ ಹುಲಗಪ್ಪ ಪರಾರಿಯಾಗಿದ್ದಾನೆ. ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಹುಲಗಪ್ಪನಿಗಾಗಿ ಹುಡುಕಾಟ ನಡೆದಿದೆ.Sign in to your account
Username or Email Address


Password

 Remember Me


