ತುಮಕೂರು: ಜಿಲ್ಲಾ ಪಂಚಾಯತ್ ಸದಸ್ಯ ನಾರಾಯಣ ಮತ್ತು ಅವರ ಬೆಂಬಲಿಗರು ಶ್ಯಾಮ್ ಎಂಬ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರೋ ಘಟನೆ ತುಮಕೂರಿನಲ್ಲಿ ನಡೆದಿದೆ.ನಾರಾಯಣ ಮತ್ತು ಶ್ಯಾಮ್ ತಿಪಟೂರು ಬಳಿ ಲೇಔಟ್ ನಿರ್ಮಾಣ ಮಾಡುತ್ತಿದ್ದರು. ಅದರಲ್ಲಿನ ನಿವೇಶನಗಳ ಹಂಚಿಕೆ ವಿಚಾರದಲ್ಲಿ ಜಗಳ ನಡೆದಿದೆ. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡ ಜಿ.ಪಂ ಸದಸ್ಯ ನಾರಾಯಣ ಮತ್ತು ಅವರ ಬೆಂಬಲಿಗರು, ಶ್ಯಾಮ್‍ನನ್ನು 2 ದಿನಗಳ ಹಿಂದೆ ಕಿಡ್ಯ್ನಾಪ್ ಮಾಡಿ ಮನಬಂದಂತೆ ಥಳಿಸಿದ್ದಾರೆ. ಇದರಿಂದ ಶ್ಯಾಮ್ ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು ತಿಪಟೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆಗೆ ಸಂಬಂಧಿಸಿದಂತೆ ಜಿ.ಪಂ ಸದಸ್ಯ ನಾರಾಯಣ ಮತ್ತು ಅವರ 8 ಜನ ಬೆಂಬಲಿಗರ ವಿರುದ್ಧ ತಿಪಟೂರು ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


