ಬಳ್ಳಾರಿ: ಜಿಲ್ಲೆಯ ವಿಮ್ಸ್ ಆಸ್ಪತ್ರೆಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಶಾರ್ಟ್ ಸರ್ಕ್ಯೂ ಟ್‍ನಿಂದ ಸಂಭವಿಸಿದ ಅಗ್ನಿ ಅವಘಡಕ್ಕೆ ಸಾಕಷ್ಟು ಪ್ರಮಾಣದ ಔಷಧಿಗಳು ಮತ್ತು ಹಳೆಯ ವಾರ್ಡನಲ್ಲಿದ್ದ ಬೆಡ್‍ಗಳು ಸುಟ್ಟು ಭಸ್ಮವಾಗಿವೆ.ಎಂಎಸ್1 ವಾರ್ಡನಲ್ಲಿ ಕಾಣಿಸಿಕೊಂಡ ಬೆಂಕಿಯಲ್ಲಿ ಅದೃಷ್ಟವಶಾತ್ ಯಾವುದೇ ರೋಗಿಗಳಿಗೆ ಅನಾಹುತವಾಗಿಲ್ಲ. ಶಾರ್ಟ್ ಸರ್ಕ್ಯೂ ಟ್‍ನಿಂದ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ವಾರ್ಡ್ ಪಕ್ಕದಲ್ಲಿದ್ದ ರೋಗಿಗಳು ಹಾಗೂ ಸಂಭಧಿಕರು ಆಸ್ಪತ್ರೆಯಿಂದ ಹೊರಗೆ ಓಡಿ ಹೋಗಿದ್ದಾರೆ.ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ 2 ವಾಹನಳು ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. Sign in to your account
Username or Email Address


Password

 Remember Me


