ಮಂಡ್ಯ: ಮೂರು ಕಣ್ಣು, ಎರಡು ಮೂಗಿರುವ ವಿಚಿತ್ರ ಹೆಣ್ಣು ಕರುವೊಂದು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ನೀಲನಹಳ್ಳಿಯಲ್ಲಿ ಜನಿಸಿದೆ.ಗ್ರಾಮದ ದೇವರಾಜು ಎಂಬ ರೈತ ಒಂದು ವರ್ಷದ ಹಿಂದೆ ಹಸುವೊಂದನ್ನು ಕೊಂಡು ತಂದಿದ್ರು. ಇದೀಗ ಹಸು ಹೆಣ್ಣು ಕರುವಿಗೆ ಜನ್ಮ ನೀಡಿದ್ದು, ಬೇರೆಲ್ಲ ಕರುಗಳಿಗಿಂತ ಇದು ಭಿನ್ನವಾಗಿದೆ. ಈ ಹೆಣ್ಣು ಕರುವಿಗೆ ಮೂರು ಕಣ್ಣುಗಳು, ಎರಡು ಮೂಗು ಇದೆ. ಮುಖದ ಎರಡು ಬದಿ ಮತ್ತು, ಹಣೆಯ ಮಧ್ಯಭಾಗದಲ್ಲಿ ಕರುವಿಗೆ ಕಣ್ಣಿದೆ. ಕರು ಆರೋಗ್ಯವಾಗಿದ್ದು ಅದರ ತಾಯಿ ಕೂಡ ಸುಮಾರು ಆರು ಲೀಟರ್‍ನಷ್ಟು ಹಾಲು ನೀಡುತ್ತಿದೆ.ಮೂರು ಕಣ್ಣುಗಳಿರುವ ಕರು ಜನಿಸಿದ ವಿಷಯ ತಿಳಿದ ಗ್ರಾಮಸ್ಥರು, ರೈತ ದೇವರಾಜು ಮನೆಗೆ ಬಂದು ಕರುವನ್ನ ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ. ಇನ್ನು ತಮ್ಮ ಮನೆಯಲ್ಲಿ ಜನಿಸಿರುವ ಮೂರು ಕಣ್ಣುಗಳಿರುವ ಕರುವನ್ನ ಸ್ವಲ್ಪ ದಿನ ಸಾಕಿ, ಆ ನಂತರ ಯಾವುದಾದರೂ ದೇವಸ್ಥಾನಕ್ಕೆ ದಾನ ಮಾಡುತ್ತೇವೆ ಅಂತಿದ್ದಾರೆ ಕರುವಿನ ಮಾಲೀಕ ದೇವರಾಜು.






 Advertisement 




Sign in to your account
Username or Email Address


Password

 Remember Me


