ಮೈಸೂರು: ಕಾವೇರಿ ನೀರಿನ (Cauvery Water) ವಿಚಾರದಲ್ಲಿ ಕೊನೆಗೂ ಮೌನ ಮುರಿದ ಸುತ್ತೂರು ಶ್ರೀಗಳು (Suttur Shree) ಪತ್ರಿಕಾ ಪ್ರಕಟಣೆ ಮೂಲಕ ಕಾವೇರಿ ವಿಚಾರದಲ್ಲಿ ತಮ್ಮ ಧ್ವನಿ ಎತ್ತಿದ್ದಾರೆ.ಪತ್ರದ ವಿವರ: ಕಾವೇರಿ ನೀರಿನ ಸಮಸ್ಯೆ ಮತ್ತೊಮ್ಮೆ ಉಲ್ಬಣಿಸಿದೆ. ಪ್ರತಿವರ್ಷವೂ ಈ ಸಮಸ್ಯೆ ಉಂಟಾಗುತ್ತಲೇ ಇದೆ. ಶತಮಾನಗಳಿಂದ ಇದೊಂದು ಜ್ವಲಂತ ಸಮಸ್ಯೆಯಾಗಿದೆ. ಪ್ರಾರಂಭದ ದಿನಗಳಿಂದಲೂ ತಮಿಳುನಾಡು ತನಗೆ ಅಗತ್ಯವಾದುದಕ್ಕಿಂತ ಹೆಚ್ಚಿನ ನೀರನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಲೇ ಇದೆ. ಕರ್ನಾಟಕದ ಕಾವೇರಿ ನದಿ ಪಾತ್ರದ ರೈತರು ಸಂಕಷ್ಟಕ್ಕೆ ಒಳಗಾಗುತ್ತಲೇ ಇದ್ದಾರೆ.ಮೈಸೂರು- ಬೆಂಗಳೂರು ಇತರೆಡೆಗಳಿಗೆ ಕುಡಿಯುವ ನೀರಿಗೂ ಸಮಸ್ಯೆ ತಲೆದೋರುತ್ತಿದೆ. ಇದಕ್ಕೆ ಅಂತಿಮ ಪರಿಹಾರ ಯಾವಾಗ ಎಂಬುದೇ ಪ್ರಶ್ನಾರ್ಥಕವಾಗಿದೆ. ಕರ್ನಾಟಕ ಸರ್ಕಾರವು ಎಲ್ಲ ಸಂದರ್ಭಗಳಲ್ಲಿಯೂ ನೆರೆರಾಜ್ಯದ ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಲೇ ಬಂದಿದೆ. ತನಗೆ ಎಷ್ಟೇ ತೊಂದರೆಗಳಾದರು ನ್ಯಾಯಾಧೀಕರಣ ಮತ್ತು ನ್ಯಾಯಾಲಯಗಳ ತೀರ್ಪುಗಳನ್ನು ಜನಾಭಿಪ್ರಾಯದ ಕಡು ವಿರೋಧದ ನಡುವೆಯೂ ಗೌರವಿಸಿ ಪಾಲಿಸುತ್ತ ಬಂದಿದೆ. ಇದನ್ನು ತಮಿಳುನಾಡಾಗಲಿ ಅಥವಾ ಸಂಬಂಧಪಟ್ಟವರು ಯಾರೇ ಆಗಲಿ ದೌರ್ಬಲ್ಯವೆಂದು ಭಾವಿಸಬಾರದು.ಈ ಸಮಸ್ಯೆಗೆ ಅಂತಿಮ ಪರಿಹಾರದ ಅಗತ್ಯವಿದೆ. ಮಳೆಯನ್ನು ಆಧರಿಸಿ ನೀರಿನ ಸಂಗ್ರಹದ ಆಧಾರದ ಮೇಲೆ ನೀರು ಹಂಚಿಕೆಯ ಬಗೆಗೆ ಪ್ರತಿವರ್ಷವೂ ಕ್ರಮ ತೆಗೆದುಕೊಳ್ಳಬೇಕಾದುದು ಅಗತ್ಯ. ಪ್ರತಿವರ್ಷ ಆಯಾ ಕಾಲಕ್ಕೆ ಸರಿಯಾಗಿ ಮಳೆಯಾದರೆ ಈ ಸಮಸ್ಯೆ ಉಂಟಾಗುವುದಿಲ್ಲ. ಆದರೆ ಅನಾವೃಷ್ಟಿಯಾದಾಗಲೆಲ್ಲ ಈ ಸಮಸ್ಯೆ ಸಹಜವಾಗಿ ಉಂಟಾಗುತ್ತಲೇ ಇರುತ್ತದೆ. ಇದನ್ನೂ ಓದಿ: ನಡ್ಡಾ ಪ್ರಾರ್ಥನೆ ವೇಳೆ ಗಣೇಶ ಪೆಂಡಾಲ್‍ನಲ್ಲಿ ಅಗ್ನಿ ದುರಂತ – ಪವಾಡದಂತೆ ಸುರಿದ ಮಳೆಯಿಂದ ತಪ್ಪಿದ ಅನಾಹುತಇದೀಗ ಉಲ್ಬಣಿಸಿರುವ ಸಮಸ್ಯೆಗೆ ಭಾರತ ಸರ್ಕಾರ, ಸರ್ವೋಚ್ಚ ನ್ಯಾಯಾಲಯ ಮತ್ತು ನ್ಯಾಯಾಧೀಕರಣಗಳು ಸಮಾಲೋಚಿಸಿ ಕರ್ನಾಟಕ-ತಮಿಳುನಾಡು ಹೊರತಾದ ಹೊರ ರಾಜ್ಯಗಳ ನೀರಾವರಿ ತಜ್ಞರ ಸಮಿತಿ ರಚಿಸಿ, ನೀರಿನ ಸಂಗ್ರಹಣೆಯ ವಾಸ್ತವಾಂಶವನ್ನು ಅಧ್ಯಯನ ಮಾಡಿ ಸಮಸ್ಯೆಗೆ ಪರಿಹಾರ ಸೂಚಿಸುವುದು ಇಂದಿನ ತುರ್ತು ಅಗತ್ಯವಾಗಿದೆ.ಕರ್ನಾಟಕದ ಜನರ ಕುಡಿಯುವ ನೀರಿಗೆ, ರೈತರ ಬೆಳೆಗಳಿಗೆ ಹಾಗೂ ಜಾನುವಾರುಗಳಿಗೆ ಅಗತ್ಯವಾಗುವ ನೀರನ್ನು ಬಳಸಿಕೊಂಡು ನಂತರ ಹೆಚ್ಚಿನ ನೀರನ್ನು ತಮಿಳುನಾಡಿಗೂ ಅನುಕೂಲವಾಗುವಂತೆ ಹರಿಸಲು ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟವರೆಲ್ಲರು ಮುಂದಾಗಬೇಕೆಂದು ಆಗ್ರಹಪೂರ್ವಕವಾಗಿ ಒತ್ತಾಯಿಸುತ್ತೇವೆ.Web Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 




















Sign in to your account
Username or Email Address


Password

 Remember Me


