ಬೆಂಗಳೂರು: ಅಗ್ನಿ ಶ್ರೀಧರ್ ಮನೆಯ ಮೇಲೆ ದಾಳಿ ನಡೆಸದಂತೆ ಸರ್ಕಾರದ ಪ್ರಭಾವಿ ಸಚಿವರೊಬ್ಬರು ಪೊಲೀಸರ ಮೇಲೆ ಒತ್ತಡ ಹೇರಿದ್ದರು ಎನ್ನುವ ಎಕ್ಸ್ ಕ್ಲೂಸಿವ್ ಮಾಹಿತಿ ಪಬ್ಲಿಕ್ ಟಿವಿಗೆ ಸಿಕ್ಕಿದೆ.ಹೌದು. ಮಂಗಳವಾರ ಪೊಲೀಸರು ಮನೆ ಮೇಲೆ ದಾಳಿ ನಡೆಸುತ್ತಾರೆ ಎನ್ನುವ ವಿಚಾರ ಗೊತ್ತಾಗಿ ಸಿದ್ದು ಸರ್ಕಾರದ ಪ್ರಭಾವಿ ಸಚಿವರು ದಾಳಿ ನಡೆಸದಂತೆ ಮತ್ತು ಪ್ರಕರಣದಿಂದ ಅಗ್ನಿ ಶ್ರೀಧರ್ ಹೆಸರನ್ನು ಕೈ ಬಿಡುವಂತೆ ಒತ್ತಡ ಹೇರಿದ್ದರು ಎನ್ನುವ ವಿಚಾರ ಪೊಲೀಸ್ ಮೂಲಗಳಿಂದ ಸಿಕ್ಕಿದೆ.ಅಗ್ನಿ ಶ್ರೀಧರ್ ಮನೆಯಲ್ಲಿ ಶೋಧ ನಡೆಸಬೇಡಿ ಎಂದು ಬೆಳಗ್ಗೆಯಿಂದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಂತ್ರಿಯೊಬ್ಬರು ಪದೇ ಪದೇ ಕರೆ ಮಾಡುತ್ತಿದ್ದರು. ಆದರೆ ಈ ಕರೆಯ ಒತ್ತಡಕ್ಕೆ ಮಣಿಯದ ಅಧಿಕಾರಿ 5 ಗಂಟೆಗೆ ಮಾತನಾಡುತ್ತೇನೆ ಎಂದು ಪ್ರತಿಕ್ರಿಯಿಸಿದ್ದರು.ಶೋಧ ಕಾರ್ಯ ನಡೆಸಿ ಎಫ್‍ಐಆರ್ ಹಾಕಿದ ಮೇಲೆ ಪೊಲೀಸ್ ಅಧಿಕಾರಿ ಸಚಿವರಿಗೆ ಕರೆ ಮಾಡಿದ್ದರು. ಈ ವೇಳೆ ಅಧಿಕಾರಿಯ ಉತ್ತರವನ್ನು ಕೇಳಿಸಿಕೊಂಡು ಗರಂ ಆದ ಸಚಿವರು, “ಆಯ್ತು ಏನೋ ಮಾಡಿ ಅಂಥ ಹೇಳಿ” ಫೋನ್ ಕಟ್ ಮಾಡಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.Sign in to your account
Username or Email Address


Password

 Remember Me


