ಯಾದಗಿರಿ: ಜಿಲ್ಲೆಯ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾದ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ಗ್ರಾಮದಲ್ಲಿ ನಡೆಯುವ ಶ್ರೀ ಮೌನೇಶ್ವರ ಜಾತ್ರೆಯಲ್ಲಿ ಸಾಧು ಸಂತರು ಗಾಂಜಾ ಸೇದಿ ಅದರ ಗಮ್ಮತ್ತಿನಲ್ಲಿ ತೇಲಾಡುತ್ತಾರೆ.ಈ ದೇವಸ್ಥಾನದಲ್ಲಿ ಮಸೀದಿಯು ಐಕ್ಯವಾಗಿದೆ. ಹಾಗಾಗಿ ಜಾತ್ರೆಯಲ್ಲಿ ಎಲ್ಲ ಧರ್ಮದ ಜನರು ಭಾಗವಹಿಸುತ್ತಿರುವುದು ವಿಶೇಷ. ಜಾತ್ರೆಯ ಕೈಲಾಸ ಕಟ್ಟೆ ಎಂಬಲ್ಲಿ ಸಾಧು ಸಂತರ ಗಾಂಜಾ ಗಮ್ಮತ್ತು ನಡೆಯುತ್ತದೆ. ಕೈಲಾಸ ಮಂಟಪ ಹೆಸರಿನಂತೆ ಸಾಧುಗಳಿಗೆ ಈ ಸ್ಥಳ ಸ್ವರ್ಗ ಲೋಕ. ಇಲ್ಲಿಯೇ ಬಂದು ದೇವರ ಸ್ಮರಣೆ ಮಾಡುತ್ತಾ, ಗಾಂಜಾ ಸೇವಿಸುತ್ತಾ ಅವರದೇ ಲೋಕದಲ್ಲಿ ತೇಲಾಡುತ್ತಾರೆ.ಈ ಜಾತ್ರೆಯಲ್ಲಿ ರಾಜಾರೋಷವಾಗಿ ಎಗ್ಗಿಲ್ಲದೇ ಗಾಂಜಾ ಮಾರಾಟದ ಜೊತೆ ಭಕ್ತರು ಸಾಧುಗಳಿಗೆ ಗಾಂಜಾವನ್ನು ನೈವೈದ್ಯವಾಗಿ ನೀಡುತ್ತಾರೆ. ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ.ಪ್ರತಿ ವರ್ಷ ನಡೆಯುವ ಜಾತ್ರೆಗೆ ದೇವರ ದರ್ಶನ ಪಡೆಯಲು ಬರುವ ಭಕ್ತರು ಸಹ ಈ ದುಶ್ಚಟಕ್ಕೆ ಒಳಗಾಗುತ್ತಿರುವುದು ಆತಂಕಕಾರಿ ವಿಷಯ.ಜಾತ್ರೆಯಲ್ಲಿ ಗಾಂಜಾ ವಹಿವಾಟು ನಡೆಯುತ್ತಿರುವುದನ್ನು ಗಮನಕ್ಕೆ ತಂದರೂ ಜಿಲ್ಲಾಡಳಿತ ಕಡಿವಾಣ ಹಾಕಲು ವಿಫಲವಾಗಿದೆ.






 Advertisement 




Sign in to your account
Username or Email Address


Password

 Remember Me


