ಚಿಕ್ಕಮಗಳೂರು: ಸಾಕು ತಂದೆಯೇ ಮಗಳ ಮೇಲೆ ನಿರಂತರ ಅತ್ಯಾಚಾರವೆಸಗಿ ಮಗಳನ್ನ ಗರ್ಭಿಣಿ ಮಾಡಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪದಲ್ಲಿ ನಡೆದಿದೆ.ಮಕ್ಕಳಿಲ್ಲದ ಕಾರಣ ಹೆಣ್ಣು ಮಗುವೊಂದನ್ನ ದತ್ತು ತೆಗೆದುಕೊಂಡು ಸಾಕಿದ್ದ 59 ವರ್ಷದ ಕೃಷ್ಣಪ್ಪ ತಾನೇ ಎತ್ತಿ, ಮುದ್ದಾಡಿ ಬೆಳೆಸಿದ್ದ ಏಳನೇ ತರಗತಿ ಓದುತ್ತಿರೋ ಮಗಳನ್ನ ನಿರಂತರವಾಗಿ ಲೈಂಗಿಕ ತೃಪ್ತಿಗೆ ಬಳಸಿಕೊಂಡಿದ್ದ. ಆ ಬಾಲಕಿ ಈಗ ಮೂರು ತಿಂಗಳ ಗರ್ಭೀಣಿ. ಕೃಷ್ಣಪ್ಪ ಬಾಲಕಿಗೆ ಕೆಲ ನಾಟಿ ಔಷಧಿಗಳನ್ನು ಕೊಡಿಸಿದ್ದ ಎಂದು ಹೇಳಲಾಗ್ತಿದೆ.ಇದೀಗ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರೋ ಕೊಪ್ಪ ತಾಲೂಕಿನ ಜೈಪುರ ಪೊಲೀಸರು ಆರೋಪಿ ಕೃಷ್ಣಪ್ಪನನ್ನ ಬಂಧಿಸಿದ್ದಾರೆ. ಸಂತ್ರಸ್ಥ ಬಾಲಕಿಗೆ ಕೊಪ್ಪದ ಮಹಿಳಾ ಸಾಂತ್ವಾನ ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ.Sign in to your account
Username or Email Address


Password

 Remember Me


