ಬೆಂಗಳೂರು: ಫ್ಯಾಷನ್ ಇವೆಂಟ್ ಮ್ಯಾನೇಜರ್‍ನಿಂದ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆದಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಪ್ರಗದೀಶ್ ಬಂಧಿತ ಆರೋಪಿ. ಬೆಂಗಳೂರಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಮುಂಬೈ ಮೂಲದ 17 ವರ್ಷದ ಯುವತಿ ಪ್ರಗದೀಶ್‍ಗೆ ಫೇಸ್‍ಬುಕ್‍ನಲ್ಲಿ ಪರಿಚಯವಾಗಿದ್ದಳು. ಫೆಬ್ರವರಿ 5ರಂದು ಯುವತಿಯನ್ನು ಮನೆಗೆ ಕರೆದಿದ್ದ ಪ್ರಗದೀಶ್ ಹಾಲಿನಲ್ಲಿ ಮತ್ತು ಬರಿಸುವ ಮಾತ್ರೆ ನೀಡಿ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ.ಅತ್ಯಾಚಾರದ ವಿಡಿಯೋ ಮಾಡಿ ಪ್ರಗದೀಶ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಡುವ ಬೆದರಿಕೆ ಹಾಕಿ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಯುವತಿಗೆ ಬ್ಲಾಕ್‍ಮೇಲ್ ಮಾಡಿದ್ದಾನೆ.ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರೋ ರಾಮಮೂರ್ತಿ ನಗರ ಪೊಲೀಸರು ಆರೋಪಿ ಪ್ರಗದೀಶ್‍ನನ್ನು ಬಂಧಿಸಿದ್ದಾರೆ.Sign in to your account
Username or Email Address


Password

 Remember Me


