ಶಿವಮೊಗ್ಗ: ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ಆರಂಭಗೊಂಡ ವಸ್ತ್ರ ಸಂಹಿತೆ ವಿವಾದ ಸದ್ಯಕ್ಕೆ ಶಮನಗೊಳ್ಳುವ ಲಕ್ಷಣಗಳು ಕಾಣಿಸುತ್ತಿಲ್ಲ. ಇದುವರೆಗೂ ಕ್ಯಾಂಪಸ್‍ನ ಒಳಗಿದ್ದ ವಿವಾದ ಈಗ ಹೊರಗೂ ವ್ಯಾಪಿಸಿದೆ. ಪರ-ವಿರೋಧ ಚರ್ಚೆ, ವಾಗ್ವಾದ ಆರಂಭಗೊಂಡಿವೆ. ಬೆಂಕಿಗೆ ತುಪ್ಪ ಹಾಕುವಂತೆ ಎರಡು ವಾಟ್ಸಪ್ ವಿಡಿಯೋಗಳು ವ್ಯಾಪಕವಾಗಿ ಹರಿದಾಡುತ್ತಿವೆ.ಶಿವಮೊಗ್ಗ ಮೂಲದ ದುಬೈನಲ್ಲಿರುವ ಇಬ್ಬರು ಯುವಕರು ಅತ್ಯಂತ ಆಶ್ಲೀಲವಾಗಿ ಒಂದು ಧರ್ಮದವರ ಅವಹೇಳನ ಮಾಡಿ ವಾಟ್ಸಪ್ ವೀಡಿಯೋ ಕಳಿಸಿದ್ದಾರೆ. ಇದು ವ್ಯಾಪಕವಾಗಿ ಹರಡುತ್ತಿದ್ದಂತೆ, ಇದಕ್ಕೆ ಪ್ರತಿಯಾಗಿ ಶಿವಮೊಗ್ಗದ ಯುವಕ ಅತ್ಯಂತ ಕೀಳು ಭಾಷೆಯಲ್ಲಿ ಇನ್ನೊಂದು ವೀಡಿಯೋ ಮಾಡಿ ಹಂಚಿದ್ದಾನೆ.ಎರಡೂ ವಿಡಿಯೋಗಳು ವ್ಯಾಪಕವಾಗಿ ಹರಡುತ್ತಿದ್ದು, ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಕೋಟೆ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಇಂತಹ ವೀಡಿಯೋ ಹರಡಿ ಸಾಮಾಜಿಕ ನೆಮ್ಮದಿಗೆ ಭಂಗ ತರುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. Sign in to your account
Username or Email Address


Password

 Remember Me


