ರಾಯಚೂರು: ಎರಡು ಲಾರಿಗಳು ಮುಖಾಮುಖಿ ಡಿಕ್ಕಿಯಾಗಿ ಓರ್ವ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಲಿಂಗಸಗೂರು ತಾಲೂಕಿನ ಮಸ್ಕಿ ಪಟ್ಟಣದ ಮುದಬಾಳ ಕ್ರಾಸ್‍ನಲ್ಲಿ ನಡೆದಿದೆ.ಆಂಧ್ರ ಮೂಲದ ತ್ರಿಪಾಲ್ (28) ಮೃತ ಚಾಲಕ. ಮತ್ತೋರ್ವ ಚಾಲಕ ಲಿಂಗಸಗೂರು ತಾಲೂಕಿನ ಕೆಂಬಾವಿ ಗ್ರಾಮದ ದಶರಥ ಎಂಬವರು ಒಂದು ಕಾಲನ್ನು ಕಳೆದುಕೊಂಡು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.ಬೆಳಗಿನ ಜಾವ 5 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದ್ದು ಎರಡೂ ಲಾರಿಗಳು ಸಂಪೂರ್ಣ ಜಖಂಗೊಂಡಿವೆ. ಲಾರಿಗಳು ಅಪ್ಪಚ್ಚಿಯಾಗಿದ್ದರಿಂದ ಪೊಲೀಸರು ಚಾಲಕನ ಮೃತದೇಹವನ್ನ ಜೆಸಿಬಿ ಮೂಲಕ ಹೊರತೆಗೆದಿದ್ದಾರೆ. ಎರಡೂ ಲಾರಿಗಳ ಕ್ಲೀನರ್‍ಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಹಿನ್ನೆಲೆ ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Sign in to your account
Username or Email Address


Password

 Remember Me


