ತುಮಕೂರು: ತಾಳಿ ಕಟ್ಟಬೇಕಿದ್ದ ವರ ಕಲ್ಯಾಣ ಮಂಟಪದಲ್ಲೇ ಸಾವನ್ನಪಿರುವ ದಾರುಣ ಘಟನೆ ತುಮಕೂರಿನಲ್ಲಿ ನಡೆದಿದೆ. ನಗರದ ಗವಿರಂಗ ಕಲ್ಯಾಣ ಮಂಟಪದಲ್ಲಿ ಇಂದು ಮುಹೂರ್ತ ನಡೆಯಬೇಕಿದ್ದ ವರ ಸಾವನ್ನಪ್ಪಿ ಕಲ್ಯಾಣಮಂಟಪ ಸಾವಿನ ಮನೆಯಾಗಿ ಕುಟುಂಬಸ್ಥರ ದುಃಖಕ್ಕೆ ಕಾರಣವಾಗಿದೆ.ಮಧುಗಿರಿ ಮೂಲದ ವಸಂತ್‍ಕುಮಾರ್ ಹಾಗೂ ತುಮಕೂರಿನ ಕಾತ್ಯಾಯಿನಿಗೆ ಇಂದು ಮದುವೆ ನಿಶ್ಚಯವಾಗಿತ್ತು. ಶನಿವಾರದಂದು ಆರತಕ್ಷತೆ ಮುಗಿಸಿದ್ದ ಜೋಡಿ ಇಂದು ಅರಶಿಣ ಶಾಸ್ತ್ರ ಮುಗಿಸಿದ್ದರು. ಮುಂಜಾನೆ ಶಾಸ್ತ್ರ ಮುಗಿಸಿ ಮುಹೂರ್ತಕ್ಕೆ ಸಿದ್ಧವಾಗ್ತಿದ್ದ ವಸಂತ್ ಕುಮಾರ್ ಹೃದಯಾಘಾತದಿಂದ ಕುಸಿದುಬಿದ್ದು ಸಾವನ್ನಪಿದ್ದಾರೆ.ಸದ್ಯ ಕಲ್ಯಾಣಮಂಟಪದಲ್ಲಿ ನೀರವ ಮೌನ ಆವರಿಸಿದ್ದು, ಕುಟುಂಬಸ್ಥರು ದುಃಖದ ಮಡುವಿನಲ್ಲಿ ಮುಳುಗಿದ್ದಾರೆ. ಕಾತ್ಯಾಯಿನಿ ಮತ್ತು ವಸಂತ್ ಕುಮಾರ್ ಇಬ್ಬರೂ ಎಂ.ಟೆಕ್ ಪದವೀಧದಾರಾಗಿದ್ದು, ವಸಂತ್ ಕುಮಾರ್ ಸಾವಿನಿಂದ ಇದೀಗ ಮದುವೆ ಮುರಿದುಬಿದ್ದಿದೆ.Sign in to your account
Username or Email Address


Password

 Remember Me


