ಚಿಕ್ಕಮಗಳೂರು: ವಿಷಾಹಾರ ಸೇವನೆ ಹಿನ್ನೆಲೆಯಲ್ಲಿ 6 ಹಸುಗಳು ಸಾವನ್ನಪ್ಪಿರುವ ಘಟನೆ ಶುಕ್ರವಾರ ರಾತ್ರಿ ಚಿಕ್ಕಮಗಳೂರು ತಾಲೂಕಿನ ಗಿಡ್ಡೇನಹಳ್ಳಿ ಗ್ರಾಮದಲ್ಲಿ ನಡೆದಿದೆ.ರೈತ ರೇಣುಕಪ್ಪ ಎಂಬುವರಿಗೆ ಸೇರಿದ ಸುಮಾರು 7 ಲಕ್ಷ ರೂಪಾಯಿ ಬೆಲೆಬಾಳುವ ಆರು ಹಸುಗಳು ಸಾವನ್ನಪ್ಪಿವೆ. ಶುಕ್ರವಾರ ರಾತ್ರಿ ಹಸುಗಳು ಮೇವು ತಿಂದ ನಂತರ ಏಕಾಏಕಿ ಹಸುಗಳು ಸಾವಿಗೀಡಾಗಿದ್ದು, ತನಗಾಗದೇ ಇರುವರು ಮೇವಿನಲ್ಲಿ ವಿಷ ಬೆರೆಸಿದ್ದಾರೆಂದು ರೇಣುಕಪ್ಪ ದುಃಖದಿಂದ ಹೇಳುತ್ತಾರೆ.ಮನೆಗೆ ಆಸರೆಯಾಗಿದ್ದ ಹಸುಗಳು ಏಕಾಏಕಿ ಸಾವನನಪ್ಪಿದ ಪರಿಣಾಮ ರೈತ ರೇಣುಕಪ್ಪ ದಿಕ್ಕು ತೋಚದಂತಾಗಿದೆ ಎಂದು ತಿಳಿಸಿದರು. ಸ್ಥಳಕ್ಕೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.Sign in to your account
Username or Email Address


Password

 Remember Me


