ಕೊಪ್ಪಳ: ಅಧಿಕಾರ ಇಲ್ಲ, ಜನ ಬರುತ್ತಿಲ್ಲ ಎಂದು ಹತಾಶರಾಗಿ ಎಸ್‍ಎಂ ಕೃಷ್ಣ ಪಕ್ಷ ತೊರೆದಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿಕೆ ನೀಡಿದ್ದಾರೆ.ಇಂದು ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಾಯರಡ್ಡಿ, ಎಸ್‍ಎಂ ಕೃಷ್ಣ ಹಿಂದೆ ಎಲ್ಲಾ ರೀತಿಯ ಅಧಿಕಾರ ಅನುಭವಿಸಿದಂತವರು. ಈಗ ವಯಸ್ಸಾಗಿದೆ, ಅಧಿಕಾರ ಇಲ್ಲ, ಜನರು ತಮ್ಮತ್ತ ಸುಳಿಯುತ್ತಿಲ್ಲ ಎಂದು ಹತಾಶರಾಗಿದ್ದಾರೆ. ವಯಸ್ಸಾದ ಮೇಲೆ ಹತಾಶರಾಗುವುದು ಸಹಜ. ಎಸ್‍ಎಂ ಕೃಷ್ಣ ಗೌರವಯುತ ರಾಜಕಾರಣಿಗಳಾಗಿದ್ದಾರೆ. ಮತ್ತೆ ನಮ್ಮ ಪಕ್ಷಕ್ಕೆ ಮರಳಿ ಬರುತ್ತಾರೆ ಎಂಬ ವಿಶ್ವಾಸವಿದೆ ಅಂತ ಹೇಳಿದ್ರು.ಜಾಫರ್ ಷರೀಫ್ ಮತ್ತು ಜನಾರ್ದನ ಪೂಜಾರಿ ಪಕ್ಷದ ವಿರುದ್ಧವಾಗಿ ಮಾತನಾಡುವುದು ಸರಿಯಲ್ಲ. ಜಾಫರ್ ಶರೀಫ್ ಮೊಮ್ಮಗನಿಗೆ ಟಿಕೆಟ್ ನೀಡಿ ಮುಖ್ಯ ಮಂತ್ರಿಗಳು ಎಲ್ಲ ರೀತಿಯ ಸಹಕಾರ ನೀಡಿದ್ದಾರೆ. ಆದ್ರೂ ಮುಖ್ಯ ಮಂತ್ರಿಗಳು ಕಡೆಗಣಿಸಿದ್ದಾರೆ ಎಂದು ಹೇಳುವುದು ಸರಿಯಲ್ಲ. ಅದರಂತೆ ಜನಾರ್ದನ ಪೂಜಾರಿ ಕೂಡ ಅನಾಗರಿಕ ರೀತಿಯಲ್ಲಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ರು.ಬಸವರಾಜ ರಾಯರಡ್ಡಿ ಗೆ ಹಾಫ್ ನಾಲೇಡ್ಜ್ ಇದೆ ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಯರಡ್ಡಿ, ಅವರಿಗೇನು ಫುಲ್ ನಾಲೇಡ್ಜ್ ಇದೆಯಾ? ನನ್ನ ಇಲಾಖೆಯ ಬಗ್ಗೆ ಅವರಿಗೇನು ಗೊತ್ತು? ಎಂದು ಪ್ರಶ್ನಿಸಿ ಹೆಚ್‍ಡಿಕೆ ವಿರುದ್ಧ ಕಿಡಿ ಕಾರಿದ್ರು.Sign in to your account
Username or Email Address


Password

 Remember Me


