ಬೆಂಗಳೂರು: ಕಾಗೆ ಆಯ್ತು, ಗೂಬೆ ಆಯ್ತು, ಈಗ ಹಾವಿನ ಸರದಿ. ವಿಧಾನಸೌಧದ ಆವರಣದಲ್ಲಿ ನಾಗರಹಾವು ಕಾಣಿಸಿಕೊಂಡಿದೆ.ನಾರ್ಥ್ ಗೇಟ್‍ನ ಲಾನ್ ನಲ್ಲಿ ನಾಗರಹಾವು ಕಾಣಿಸಿಕೊಂಡಿದ್ದು ಕೆಲ ಕಾಲ ಆತಂಕಕ್ಕೆ ಕಾರಣವಾಗಿತ್ತು. ಜನ ಸೇರಿದ ಕೂಡಲೇ ಹಾವು ಬಿಲದ ಒಳಗಡೆ ಸೇರಿಕೊಂಡಿತು.ಈ ಹಿಂದೆ ಸಿಎಂ ಸಿದ್ದರಾಮಯ್ಯನವರ ಫಾರ್ಚುನರ್ ಕಾರು ಮೇಲೆ ಕಾಗೆಯೊಂದು ಕುಳಿತುಕೊಂಡಿತ್ತು. ಎರಡು ವಾರದ ಹಿಂದೆ ಕೇರಳದ ಮಂಜೇಶ್ವರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯನವರ ಪಂಚೆ ಮೇಲೆ ಕಾಗೆ ಹಿಕ್ಕೆ ಹಾಕಿತ್ತು. ಈ ಮಧ್ಯೆ ಗೂಬೆಯೂ ಬಂದಿತ್ತು. ಈ ಮೂರು ವಿಚಾರದ ಬಗ್ಗೆ ವಿಧಾನಸೌಧದ ಸಿಬ್ಬಂದಿ ಮಾತನಾಡುತ್ತಿದ್ದರು. ಈಗ ಈ ಚರ್ಚೆಗೆ ನಾಗರಹಾವು ವಿಷಯ ಹೊಸದಾಗಿ ಸೇರ್ಪಡೆಯಾಗಿದೆ.ಇದನ್ನೂ ಓದಿ:ಕಾಗೆ ಹಿಕ್ಕೆ ಹಾಕಿದ ವಿಷಯದ ಬಗ್ಗೆ ಸಿಎಂ ಹೀಗಂದ್ರು!Sign in to your account
Username or Email Address


Password

 Remember Me


