– 32 ಪ್ರಯಾಣಿಕರಿಗೆ ಗಾಯರಾಯಚೂರು: ಜಿಲ್ಲೆಯ ಸಿಂಧನೂರಿನ (Sindhanur) ಮಲ್ಲದಗುಡ್ಡ ಗ್ರಾಮದ ಬಳಿ ಶನಿವಾರ ರಾತ್ರಿ ನಡೆದಿದ್ದ ಅಪಘಾತದಲ್ಲಿ (Accident) ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಇಂದು ಸಾವನ್ನಪ್ಪಿದ್ದಾರೆ.ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ (Lorry) ಸಾರಿಗೆ ಬಸ್ (Bus) ಡಿಕ್ಕಿ ಹೊಡೆದ ದುರ್ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸುದೀಪ್ (18) ಹಾಗೂ ರಾಮಪ್ಪ (60) ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಘಟನೆಯಿಂದ ನಿರ್ವಾಹಕ ಸೇರಿ 5 ಜನರ ಸ್ಥಿತಿ ಗಂಭೀರವಾಗಿದೆ. ಬಸ್‌ನಲ್ಲಿದ್ದ 32 ಜನರಿಗೆ ಗಾಯಗಳಾಗಿವೆ. ಗಂಭೀರವಾಗಿ ಗಾಯಗೊಂಡವರನ್ನು ಬಳ್ಳಾರಿಯ ವಿಮ್ಸ್‌ಗೆ ರವಾನಿಸಲಾಗಿದೆ. ಸಣ್ಣಪುಟ್ಟ ಗಾಯಗಳಾದ ಪ್ರಯಾಣಿಕರನ್ನು ರಾಯಚೂರಿನ ರಿಮ್ಸ್, ಸಿಂಧನೂರು ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಮಂಗಳವಾರ ಬೆಂಗಳೂರು ಬಂದ್ ಇರುತ್ತಾ? – ಕನ್ನಡ ಸಂಘಟನೆಗಳಿಂದ ತಟಸ್ಥ ಧೋರಣೆಸಿಂಧನೂರಿನಿಂದ ಅಂಕಲಿಮಠದ ಕಡೆಗೆ ವೇಗವಾಗಿ ಹೊರಟಿದ್ದ ಬಸ್ ಎದುರಿಗೆ ಬಂದ ಬೈಕ್‌ಗೆ ದಾರಿ ಬಿಡಲು ಹೋಗಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿತ್ತು. ಇಂಡಿಕೇಟರ್ ಹಾಕದೆ ರಸ್ತೆ ಪಕ್ಕದಲ್ಲಿ ಲಾರಿ ನಿಲ್ಲಿಸಿದ್ದು, ಅಪಘಾತಕ್ಕೆ ಕಾರಣವಾಗಿದೆ. ಸಿಂಧನೂರಿನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಬಸ್ ಚಾಲಕ ಅಮರೇಶ್, ಲಾರಿ ಚಾಲಕ ನಾಗೇಶ್ವರರಾವ್ ವಿರುದ್ಧ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕಾವೇರಿ, ಹೇಮಾವತಿ ನೀರಿಗಾಗಿ ಮಂಗಳವಾರ ಕೆಆರ್ ಪೇಟೆ ಬಂದ್Web Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 




















Sign in to your account
Username or Email Address


Password

 Remember Me


