ಬೀದರ್: ಯಾರು ಇಲ್ಲದ ವೇಳೆ ಮಸೀದಿ (Mosque) ಮೇಲೆ ಕಿಡಿಗೇಡಿಗಳು ಭಗವಾಧ್ವಜ (Bhagwa Dhwaj) ಹಾರಿಸಿ ಪರಾರಿಯಾದ ಘಟನೆ ಬೀದರ್ (Bidar) ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಧನ್ನೂರಾ ಕೆ ಗ್ರಾಮದಲ್ಲಿ ನಡೆದಿದೆ.ಗ್ರಾಮದ ಹೊರ ವಲಯದ ಜಾಮೀಯಾ ಮಸೀದಿ (Jamia Masjid) ಮೇಲೆ ರಾತ್ರಿ ಭಗವಾಧ್ವಜ ಹಾರಿಸಿ ಕಿಡಿಗೇಡಿಗಳು ಪರಾರಿಯಾಗಿದ್ದು ಗ್ರಾಮದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ. ಬೆಳಗ್ಗೆ ವಿಷಯ ತಿಳಿದು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಬಂದ ಬಸವಕಲ್ಯಾಣ ಗ್ರಾಮೀಣ ಪೊಲೀಸರು ಗ್ರಾಮಸ್ಥರ ಮನವೊಲಿಸಿ ಭಗವಾಧ್ವಜ ತೆಗೆಸುವಲ್ಲಿ ಯಶಸ್ವಿಯಾಗಿದ್ದಾರೆ. ಗ್ರಾಪಂ ಕಚೇರಿಯಲ್ಲಿ ಗ್ರಾಮಸ್ಥರೊಂದಿಗೆ ಶಾಂತಿ ಸಭೆ ಮಾಡಿದ ಸಿಪಿಐ ನ್ಯಾಮೇಗೌಡ ಮಸೀದಿ ಮೇಲೆ ಭಗವಾಧ್ವಜ ಹಾರಿಸಿದ ಕಿಡಿಗೇಡಿಗಳನ್ನು‌ ಕೂಡಲೇ ಬಂಧಿಸುತ್ತೇವೆ. ಯಾರು ಅಶಾಂತಿಗೆ ಕಾರಣವಾಗಬಾರದು‌‌‌ ಎಂದು ಮನವಿ ಮಾಡಿದರು. ಇದನ್ನೂ ಓದಿ: ಬಿಜೆಪಿ ಜೊತೆ ದೋಸ್ತಿ – ಜೆಡಿಎಸ್‌ನಲ್ಲಿ ಅಸಮಾಧಾನ ಸ್ಫೋಟಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಗ್ರಾಮದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್‌ ಮಾಡಲಾಗಿದ್ದು ಈ ಕುರಿತು ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Web Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 




















Sign in to your account
Username or Email Address


Password

 Remember Me


