ದಾವಣಗೆರೆ: ಅತ್ತ ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುತ್ತಿರುವ ವಿಚಾರವಾಗಿ ಮಂಡ್ಯದಲ್ಲಿ ರೈತರು ಭಾರೀ ಪ್ರತಿಭಟನೆ ನಡೆಸುತ್ತಿದ್ದಾರೆ. ಇತ್ತ ಭದ್ರಾ (Bhadra) ನೀರು ಬಿಡುಗಡೆಗಾಗಿ ದಾವಣಗೆರೆ (Davanagere) ರೈತರು (Farmers) ಬೀದಿಗಿಳಿದಿದ್ದಾರೆ. ಭದ್ರಾ ನೀರು ಹರಿಸದಿದ್ದರೆ ಸೋಮವಾರ ದಾವಣಗೆರೆ ಬಂದ್‌ಗೆ ಕರೆ ನೀಡಿದ್ದಾರೆ.ಭದ್ರಾ ಕಾಡಾ ಸಮಿತಿ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದು, ಭಾರತೀಯ ರೈತ ಒಕ್ಕೂಟದಿಂದ ದಾವಣಗೆರೆ ಬಂದ್‌ಗೆ ಕರೆ ನೀಡಲಾಗಿದೆ. ಭಾನುವಾರ ಸಂಜೆ 6 ಗಂಟೆ ಒಳಗೆ ಕಾಡಾ ಲಿಖಿತ ಆದೇಶ ನೀಡದಿದ್ದರೆ ಸೋಮವಾರ ಜಿಲ್ಲಾದ್ಯಂತ ಬಂದ್‌ನ ಎಚ್ಚರಿಕೆಯನ್ನು ನೀಡಲಾಗಿದೆ.ಭದ್ರಾ ನೀರನ್ನೇ ನಂಬಿಕೊಂಡು ಸಾವಿರಾರು ರೈತರು ಈಗ ಅತಂತ್ರ ಸ್ಥಿತಿಯಲ್ಲಿದ್ದಾರೆ. ಭದ್ರಾ ಕಾಡಾ ಸಮಿತಿ ಆನ್ ಆ್ಯಂಡ್ ಆಫ್ ಪದ್ಧತಿಯಲ್ಲಿ ನೀರು ಬಿಡುತ್ತಿದೆ. ಆನ್ ಆ್ಯಂಡ್ ಆಫ್ ಪದ್ಧತಿಯಲ್ಲಿ ನೀರು ಹರಿಸಿದರೆ ಟೇಲ್ ಎಂಡ್ ರೈತರಿಗೆ ನೀರು ಸಿಗುವುದಿಲ್ಲ. ಈ ನೀರನ್ನೇ ನಂಬಿ ಸಾವಿರಾರು ಎಕರೆಯಲ್ಲಿ ಭತ್ತ ನಾಟಿ ಮಾಡಲಾಗಿದೆ. ಭದ್ರಾ ನಾಲೆ ನೀರು ನಿಲ್ಲಿಸಿದ್ದಕ್ಕೆ ಭತ್ತ ಒಣಗುತ್ತಿದೆ. ಭದ್ರಾ ನೀರಿಗಾಗಿ ಶಿವಮೊಗ್ಗ-ದಾವಣಗೆರೆ ಜಿಲ್ಲೆಯಲ್ಲಿ ರೈತರ ಜಟಾಪಟಿ ನಡೆಯುತ್ತಿದೆ. ಇದನ್ನೂ ಓದಿ: ಸೆಪ್ಟೆಂಬರ್‌ 26ರಂದು ಬೆಂಗಳೂರು ಬಂದ್‌ದಾವಣಗೆರೆ ಹಿಲ್ಲೆಯ ರೈತರ ಪರಿಸ್ಥಿತಿ ನಾ ಕೊಡೆ, ನೀ ಬಿಡೆ ಎಂಬಂತಾಗಿದೆ. ತಕ್ಷಣ ಭತ್ತಕ್ಕೆ ನೀರು ಹರಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಗುತ್ತಿದೆ. ರೈತರು ಇಲ್ಲಿನ 1 ಲಕ್ಷ 40 ಸಾವಿರ ಎಕರೆ ಪ್ರದೇಶದಲ್ಲಿ ಭತ್ತದ ಬೆಳೆ ಬೆಳೆಯುತ್ತಾರೆ. ಅದರಲ್ಲಿ 4 ಲಕ್ಷ 20 ಸಾವಿರ ಮೆಟ್ರಿಕ್ ಟನ್ ಭತ್ತ ಬೆಳೆದರೆ, 2 ಲಕ್ಷ 55 ಸಾವಿರ ಮೆಟ್ರಿಕ್ ಟನ್ ಅಕ್ಕಿ ಉತ್ಪಾದನೆಯಾಗುತ್ತದೆ. ಆದರೆ ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ನೀರು ನಿಲ್ಲಿಸಿದ ಹಿನ್ನೆಲೆ ರೈತರು ಈಗ ಆಕ್ರೋಶ ಹೊರಹಾಕುತ್ತಿದ್ದಾರೆ. ಇದನ್ನೂ ಓದಿ: ಕಾವೇರಿ ಹೋರಾಟದ ಕಿಚ್ಚು; ಬಾಯಿಗೆ ಮಣ್ಣು ಹಾಕಿಕೊಂಡು ಸರ್ಕಾರದ ವಿರುದ್ಧ ರೈತರ ಆಕ್ರೋಶWeb Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 




















Sign in to your account
Username or Email Address


Password

 Remember Me


