ಚಿಕ್ಕಬಳ್ಳಾಪುರ: ಮನೆಯ ಪಕ್ಕದ ನೀರಿನ ಸಿಮೆಂಟ್ ತೊಟ್ಟಿಯಲ್ಲಿ ಮಗುವಿನ (Child) ಮೃತದೇಹ ಪತ್ತೆಯಾಗಿದೆ. ಅನುಮಾಮಾಸ್ಪದವಾಗಿ ಮಗು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ರೇಚನಾಯ್ಕಪಲ್ಲಿ ಗ್ರಾಮದಲ್ಲಿ ನಡೆದಿದೆ.ಗ್ರಾಮದ ರಾಜಶೇಖರ ರೆಡ್ಡಿ ಹಾಗೂ ಕನ್ಯಾಕುಮಾರಿ ದಂಪತಿಯ 2 ವರ್ಷದ ಮಗು ಲಲಿತ ರೆಡ್ಡಿ ಮೃತ ದುರ್ದೈವಿ. ಮಗುವಿನ ತಾಯಿ ಕನ್ಯಾಕುಮಾರಿ ಹಾಗೂ ಅವರ ಅತ್ತೆ-ಮಾವನ ನಡುವೆ ಕೌಟುಂಬಿಕ ಕಲಹವಿದ್ದು, ಪೊಲೀಸ್ ಠಾಣೆಯಲ್ಲಿ ದೂರು ಸಹ ಕೊಡಲಾಗಿತ್ತು. ಹಲವು ಬಾರಿ ಆದರೂ ಅತ್ತೆ, ಸೊಸೆ, ಮಾವನ ನಡುವೆ ಅಷ್ಟಕ್ಕಷ್ಟೇ ಮಾತು ಇತ್ತು ಎನ್ನಲಾಗಿದೆ.ಹೀಗಿದ್ದಾಗ ತಾಯಿ ಮಗುವನ್ನು ಮನೆಯಲ್ಲಿ ಅತ್ತೆ-ಮಾವನ ಜೊತೆ ಬಿಟ್ಟು ಜಮೀನಿನ ಬಳಿ ತೆರಳಿದ್ದಾಗ ಮನೆಯಲ್ಲಿದ್ದ ಮಗು ಅನುಮಾನಾಸ್ಪದವಾಗಿ ಸಾವನ್ನಪ್ಪಿದೆ. ನೀರಿನ ತೊಟ್ಟಿಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ. ಇದನ್ನೂ ಓದಿ: ಶಾಲಾ ಆವರಣದಲ್ಲಿ ವಾಮಾಚಾರ- ತಲೆ ಬುರುಡೆ, ನಿಂಬೆ ಹಣ್ಣು, ಕುಂಕುಮ ಪತ್ತೆಮಧ್ಯಾಹ್ನ ಜಮೀನಿನ ಬಳಿ ಇದ್ದ ಮಗುವನ್ನು ತಾತ ಸೋಮಶೇಖರ್ ರೆಡ್ಡಿ ಲಾಲಿಪಾಪ್ ಕೊಡಿಸೋದಾಗಿ ಹೇಳಿ ಕರೆದುಕೊಂಡು ಹೋಗಿದ್ದ. ಇಷ್ಟು ದಿನ ಮಗುವನ್ನು ಮಾತನಾಡಿಸದ ತಾತ 3 ದಿನಗಳಿಂದ ಮಗುವಿಗೆ ಚಾಕ್ಲೇಟ್ ಕೊಡಿಸಿ ಬಹಳ ಪ್ರೀತಿಯಿಂದ ಮಾತನಾಡುತ್ತಿದ್ದ ಎನ್ನಲಾಗಿದೆ. ಹೀಗಾಗಿ ತಾತನೇ ಉದ್ದೇಶಪೂರ್ವಕವಾಗಿ ಕೊಲೆ ಮಾಡಿರುವ ಸಂಶಯ ಪೋಷಕರದ್ದಾಗಿದೆ. ಈ ಬಗ್ಗೆ ಪಾತಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಭುಗಿಲೆದ್ದ ಆಕ್ರೋಶದ ನಡುವೆಯೂ ತಮಿಳುನಾಡಿಗೆ ನೀರು; KRS ನೀರಿನ ಮಟ್ಟ 96 ಅಡಿಗೆ ಕುಸಿತWeb Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 




















Sign in to your account
Username or Email Address


Password

 Remember Me


