ಬೆಂಗಳೂರು: ಚೈತ್ರಾ (Chaitra Kundapura) ಅಂಡ್‌ ಗ್ಯಾಂಗ್‌ನ ವಂಚನೆ ಪ್ರಕರಣ ಬಹುತೇಕ ಮುಕ್ತಾಯ ಹಂತಕ್ಕೆ ಬಂದಿದೆ. ಸ್ವಾಮೀಜಿ ಬಂಧನದ ಬಳಿಕ ಎಲ್ಲಾ ಕಾನೂನು ಪ್ರಕ್ರಿಯೆಗಳು ಮುಗಿದಿದ್ದು, ಅಭಿನವ ಹಾಲಶ್ರೀ ಸಿಸಿಬಿ ತನಿಖಾಧಿಕಾರಿ (CCB Investigation Officer) ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.ಉದ್ಯಮಿ ಗೋವಿಂದ ಬಾಬು ಪೂಜಾರಿಯಿಂದ (Govind Babu Poojari) ಹಣ ಪಡೆದಿದ್ದು ನಿಜ. ಎಂಎಎಲ್‌ಎ ಟಿಕೆಟ್ ವಿಚಾರವಾಗಿ (BJP MLA Ticket Scam) ಹಣ ಪಡೆದಿದ್ದೆ, ಆದರೆ ಟಿಕೆಟ್ ಸಿಗಲಿಲ್ಲವಾದ್ದರಿಂದ ಹಣ ವಾಪಸ್ ಕೊಡೋದಾಗಿ ಹೇಳಿದ್ದೆ. ಈಗಾಗಲೆ 50 ಲಕ್ಷ ಹಣ ವಾಪಸ್‌ ಕೊಟ್ಟಿದ್ದೇನೆ. ಉಳಿದ ಹಣ ಮಠದಲ್ಲಿದೆ ಅಂತ ಸ್ವಾಮೀಜಿ ಅಧಿಕಾರಿಗಳ ಮುಂದೆ ಸತ್ಯ ಬಾಯ್ಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.ಅಲ್ಲದೇ ಈ ಪ್ರಕರಣದಲ್ಲಿ ನನ್ನದೇನೂ ತಪ್ಪಿಲ್ಲ, ಚೈತ್ರಾ ಹೇಳಿದಂತೆ ಕೇಳಿದ್ದೀನಿ. ತಪ್ಪಿಗೆ ನಾನೇ ಹೊಣೆಯಾಗಿದ್ದು, ಬೇರೆ ಯಾರೂ ಈ ಕೇಸ್ ನಲ್ಲಿ ಇಲ್ಲ ಅಂತಾ ಅಭಿನವ ಹಾಲಶ್ರೀ ಸಿಸಿಬಿ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ಇದನ್ನೂ  ಓದಿ: ಕಾವೇರಿ ವಿಚಾರದಲ್ಲಿ ಸುಪ್ರೀಂ ತೀರ್ಪು ಕರ್ನಾಟಕಕ್ಕೆ ಗಾಯದ ಮೇಲೆ ಬರ ಎಳೆದಂತಾಗಿದೆ: ಸಿ.ಟಿ.ರವಿಈ ನಡುವೆ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಪಡೆಯಲು ಹೋಗಿ 5 ಕೋಟಿ ರೂ. ಕಳೆದುಕೊಂಡಿರುವುದಾಗಿ ದೂರು ನೀಡಿರುವ ಗೋವಿಂದ ಬಾಬು ಪೂಜಾರಿ ವಿರುದ್ಧವೇ ಈಗ ಜಾರಿ ನಿರ್ದೇಶನಾಲಯದಲ್ಲಿ (ಇಡಿ) ದೂರು ದಾಖಲಾಗಿದೆ. 5 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಟಿಕೆಟ್‌ಗೆ ನೀಡಿದ್ದು ಹವಾಲಾ ಹಣ. ಅವರು ನಗದು ರೂಪದಲ್ಲಿ ನೀಡಿರುವುದು ಅಪರಾಧವಾಗಿದ್ದು ಅವರ ವಿರುದ್ಧ ತನಿಖೆ ನಡೆಸಬೇಕೆಂದು ಕೋರಿ ವಕೀಲ ನಟರಾಜ ಶರ್ಮಾ (Nataraj Sharma) ದೂರು ನೀಡಿದ್ದಾರೆ. ಇದನ್ನೂ  ಓದಿ: ಎರಡು ಸಲ ನೀರು ಬಿಟ್ಟು ಈಗ ಸುಪ್ರೀಂಕೋರ್ಟ್‌ಗೆ ಹೋಗಿದ್ದಾರೆ: ಬೊಮ್ಮಾಯಿ ಆಕ್ರೋಶWeb Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 




















Sign in to your account
Username or Email Address


Password

 Remember Me


