ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಮ್ಮ ಜವಾಬ್ದಾರಿ ಹಾಗೂ ಅಧಿಕಾರವನ್ನು ಮರೆತು ಮಾತೆತ್ತಿದರೆ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಮಧ್ಯ ಪ್ರವೇಶಿಸಬೇಕು ಎನ್ನುತ್ತಾರೆ. ಮುಂದಿನ ದಿನಗಳಲ್ಲಿ ಬಿ.ಕೆ ಹರಿಪ್ರಸಾದ್ ಅವರು ಸಿಎಂ ಬದಲಿಸುವ ವಿಚಾರ ಮಾತಾಡಿದ್ದಕ್ಕೂ ಪ್ರಧಾನಿ ಮೋದಿಯವರು ಮಧ್ಯ ಪ್ರವೇಶಿಸಬೇಕು ಎಂದರು ಅಚ್ಚರಿ ಇಲ್ಲ ಎಂದು ಬಿಜೆಪಿ (BJP) ಸರಣಿ ಟ್ವೀಟ್‍ಗಳಲ್ಲಿ ಸಿಎಂಗೆ ಟಾಂಗ್ ಕೊಟ್ಟಿದೆ.ತಮ್ಮ ಜವಾಬ್ದಾರಿ, ಅಧಿಕಾರವನ್ನು ಮರೆತ ಸಿದ್ದರಾಮಯ್ಯರವರು ಮಾತೆತ್ತಿದರೆ ಪ್ರಧಾನಿ @narendramodi ಅವರು ಮಧ್ಯಪ್ರವೇಶಿಸಬೇಕು ಎನ್ನುತ್ತಾರೆ.ಮುಂದಿನ ದಿನಗಳಲ್ಲಿ ಈ ಸಮಸ್ಯೆಗಳ ಪರಿಹಾರಕ್ಕೂ ಅವರು ಮೋದಿಯವರ ಮೊರೆ ಹೋದರೂ ಅಚ್ಚರಿಯಲ್ಲ.???? ಬಿಕೆ ಹರಿಪ್ರಸಾದ್‌ ಅವರು ಸಿಎಂ ಬದಲಿಸುವ ಮಾತನಾಡುತ್ತಿದ್ದಾರೆ; ಪ್ರಧಾನಿ ಮೋದಿಯವರು…— BJP Karnataka (@BJP4Karnataka) September 21, 2023ಅಲ್ಲದೇ ಮೂರು ಡಿಸಿಎಂ ಸ್ಥಾನಕ್ಕಾಗಿ ಕಾಂಗ್ರೆಸ್‍ನಲ್ಲಿ ಕಿತ್ತಾಟ ಜೋರಾಗಿದೆ. ರಾಜ್ಯ ಸರ್ಕಾರದ ವೈಫಲ್ಯದಿಂದ ರೈತರ ಅತ್ಮಹತ್ಯೆ ಹೆಚ್ಚಿದೆ. ಶ್ಯಾಡೋ ಸಿಎಂ ಹಾವಳಿ ಹೆಚ್ಚಾಗಿ, ರಾಜ್ಯದ ಸಚಿವರು ಹಾಗೂ ಅಧಿಕಾರಿಗಳು ಬೇಸತ್ತಿದ್ದಾರೆ. ರಾಜ್ಯದಲ್ಲಿ ಕಮಿಷನ್, ಕಲೆಕ್ಷನ್ ಹಾಗೂ ವರ್ಗಾವಣೆ ದಂಧೆ ಹೆಚ್ಚಾಗಿದೆ. ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಪ್ರಧಾನಿ ಮೋದಿಯವರು ಮಧ್ಯ ಪ್ರವೇಶಿಸಬೇಕು ಎಂದು ಬಿಜೆಪಿ ಟ್ವಿಟ್ಟರ್‌ನಲ್ಲಿ ವ್ಯಂಗ್ಯ ಮಾಡಿದೆ. ಇದನ್ನೂ ಓದಿ: ಕಾಂಗ್ರೆಸ್, ಬಿಜೆಪಿಯಿಂದ ಪ್ರತ್ಯೇಕ ಗಣೇಶನ ಪ್ರತಿಷ್ಠಾಪನೆ – ವಿಸರ್ಜನೆ ವೇಳೆ ಗುಂಪು ಘರ್ಷಣೆಪ್ರಧಾನಿ ಮೋದಿಯವರಿಗೆ ದೇಶ ಮುನ್ನೆಡೆಸುವ ಜವಾಬ್ದಾರಿ ಇದೆ. ಸಿದ್ದರಾಮಯ್ಯ ಅವರಿಗೂ ರಾಜ್ಯದ ಜವಾಬ್ದಾರಿ ಇದೆ. ಮೊದಲು ನಿಮ್ಮ ಒಳ ಜಗಳದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ. ರಾಜ್ಯದ ಜನರ ಹಿತ ಕಾಪಾಡಲು ಮಾಡಬೇಕಾದ ಕೆಲಸಗಳನ್ನು ಮಾಡಿ ಮುಖ್ಯಮಂತ್ರಿ ಸ್ಥಾನದ ಜವಾಬ್ದಾರಿಯನ್ನು ನಿರ್ವಹಿಸಿ ಎಂದು ಬಿಜೆಪಿ ಟ್ವೀಟ್‍ನಲ್ಲಿ ಬರೆದುಕೊಂಡಿದೆ. ಇದನ್ನೂ ಓದಿ: ಚೈತ್ರಾ ಕುಂದಾಪುರ ವಂಚನೆ ಪ್ರಕರಣ- ಹಾಲಶ್ರೀ ಮಠದಲ್ಲಿ ಮಹಜರುWeb Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 




















Sign in to your account
Username or Email Address


Password

 Remember Me


