ವಿಜಯನಗರ: ರಾಜ್ಯದಲ್ಲಿ ಚೈತ್ರಾ ಕುಂದಾಪುರ (Chaitra Kundapur) 5 ಕೋಟಿ ರೂ. ವಂಚನೆ ಪ್ರಕರಣ ಹೆಚ್ಚು ಸದ್ದು ಮಾಡುತ್ತಿದೆ. ಪ್ರಕರಣದ ಎ3 ಆರೋಪಿ ಹಾಲಶ್ರೀ ಸ್ವಾಮೀಜಿಯನ್ನು (Halashree Swamiji) ಅರೆಸ್ಟ್ ಮಾಡಿದ ಸಿಸಿಬಿ ಪೊಲೀಸರು (CCB Police) ಬುಧವಾರ ರಾತ್ರಿ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಹಿರೇಗಡಗಲಿ ಮಠದಲ್ಲಿ ಮಹಜರು ನಡೆಸಿದ್ದಾರೆ.ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳ ಮಹಾಸಂಸ್ಥಾನ ಮಠದಲ್ಲಿ 2 ಗಂಟೆಗೂ ಹೆಚ್ಚು ಕಾಲ ಮಹಜರು ನಡೆಸಿದರು. ಮಠಕ್ಕೆ ಎಂಟ್ರಿಯಾಗುತ್ತಿದ್ದಂತೆ ತೆಂಗಿನಕಾಯಿ ಒಡೆದು ಸ್ವಾಗತ ಮಾಡಿದರು. ಮಠದ ಒಳಗೆ ಹೋಗುತ್ತಿದ್ದಂತೆ ಅಭಿನವ ಹಾಲಶ್ರೀ ಸ್ವಾಮೀಜಿಯನ್ನೊಬ್ಬರನ್ನೇ ರೂಂ ನೊಳಗೆ ಕರೆದುಕೊಂಡು ಹೋಗಿ ಮಹಜರು ಮಾಡಿದ್ದಾರೆ.ಹಾಲಶ್ರೀ ಇರುತ್ತಿದ್ದ ರೂಂನೊಳಗೆ ಸಿಸಿಬಿ ಪೊಲೀಸರು ಕುಟುಂಬಸ್ಥರನ್ನು ಒಳಗಡೆ ಬಿಡದೆ ಹಾಲಶ್ರೀ ಜೊತೆಗೆ ಮಹಜರು ನಡೆಸಿದರು. ಹಾಲಶ್ರೀ ಜೊತೆಗೆ ಕುಟುಂಬಸ್ಥರು ಮಾತನಾಡಲು ಅವಕಾಶ ಕೇಳಿದರು. ಒಳಗಡೆ ಅವಕಾಶ ಇಲ್ಲ, ಹೊರಗಡೆ ಬಂದಾಗಲೇ ಮಾತನಾಡಲು ಹೇಳಿದರು. ಆದರೆ ಕುಟುಂಬಸ್ಥರ ಜೊತೆಗೆ ಮಾತನಾಡಲು ಹಾಲಶ್ರೀ ಮುಜುಗರಗೊಂಡು, ಕುಟುಂಬಸ್ಥರು ಏನೇ ಕೇಳಿದರೂ ಉತ್ತರಿಸಲಿಲ್ಲ. ಇದನ್ನೂ ಓದಿ: ಬಟ್ಟೆ ಅಂಗಡಿ ಹೆಸ್ರಲ್ಲಿ ವಂಚನೆ ಆರೋಪ- ಚೈತ್ರಾ ವಿಚಾರಣೆಗೆ ಒಪ್ಪಿಸುವಂತೆ ಕೋಟ ಪೊಲೀಸರ ಮನವಿಊಟ ಮಾಡಿ ಹೋಗಿ ಎಂದು ಮನವಿ ಮಾಡಿದಾಗ, ಇಲ್ಲ ಅವರ ಊಟ ಆಗಿದೆ. ನಾವು ಯಾರೂ ಊಟ ಮಾಡಲ್ಲ ನಮ್ಮ ಊಟ ಆಗಿದೆ ಎಂದು ಹೇಳಿ ಹಾಲಶ್ರೀ ಯನ್ನು ಮಹಜರು ಮಾಡಿ ಕರೆದುಕೊಂಡು ಹೋದರು. ಮಹಜರು ವೇಳೆ ಏನೆಲ್ಲಾ ಮಾಡಿದರು ಎಂಬುವುದರ ಬಗ್ಗೆ ಕುಟುಂಬಸ್ಥರಿಗೆ ಸುಳಿವು ಸಹ ಸಿಸಿಬಿ ಪೊಲೀಸರು ಬಿಟ್ಟುಕೊಟ್ಟಿಲ್ಲ. ಪತ್ನಿ, ತಂದೆ ಹಾಗೂ ಚಿಕ್ಕಪ್ಪಂದಿರು ಏನೇ ಕೇಳಿದರೂ, ಹಾಲಶ್ರೀ ಉತ್ತರಿಸದೆ ಕೈ ಸನ್ನೆ ಮಾಡಿದರೆ ಹೊರತು, ಮಾತನಾಡಿಲ್ಲ. ಹಾಕಿಕೊಂಡಿದ್ದ ಮಾಸ್ಕ್ ಸಹ ಕುಟುಂಬಸ್ಥರ ಮುಂದೆ ತೆಗೆಯದೆ ಹಾಗೆಯೇ ಸಿಸಿಬಿ ಪೊಲೀಸರ ಜೊತೆಗೆ ತೆರಳಿದರು. ಇದನ್ನೂ ಓದಿ: ಮಗಳ ಅಪಹರಣ ಕೇಸನ್ನು ಹಿಂಪಡೆಯುವಂತೆ ಹಲ್ಲೆಗೈದು ಮಹಿಳೆಗೆ ಒತ್ತಡ ಹೇರಿದ ಪೊಲೀಸ್Web Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 




















Sign in to your account
Username or Email Address


Password

 Remember Me


