ಬೆಂಗಳೂರು: ಕಾವೇರಿ ವಿಚಾರದಲ್ಲಿ ಪರಿಸ್ಥಿತಿ ಕೈ ಮೀರಿದ್ರೆ ಹೊತ್ತಿ ಉರಿಯುವ ಪರಿಸ್ಥಿತಿಗಳು ಆಗುತ್ತವೆ. ಕಾವೇರಿ ವಿಚಾರವಾಗಿ ಗಲಾಟೆಗಳಾದ್ರೆ ಕರ್ನಾಟಕ ಸರ್ಕಾರವೇ ನೇರ ಕಾರಣ ಅಂತಾ ಮಾಜಿ ಡಿಸಿಎಂ ಆರ್.ಅಶೋಕ್ ಕಿಚ್ಚು ಹೊತ್ತಿಸುವ ಹೇಳಿಕೆ ಕೊಟ್ಟಿದ್ದಾರೆ.ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾವೇರಿ ನೀರು ಬಿಟ್ಟರೆ, ನೀರು ತಡೆಯುತ್ತೇವೆ, ಬಿಜೆಪಿ ಹೋರಾಟ ಮಾಡಲಿದೆ ಅಂತೇಳಿದ್ರು. ಕಾವೇರಿ ವಿಚಾರದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದಾರೆ. ತಮಿಳುನಾಡಿಗೆ ನೀರು ಹರಿಸಿ ಸೋನಿಯಾಗಾಂಧಿ ತೃಪ್ತಿಪಡಿಸಲು ಮುಂದಾಗಿದ್ದಾರೆ. ಸೋನಿಯಾ ಚಿತಾವಣೆ ಮೇರೆಗೆ ಸಿಎಂ, ಡಿಸಿಎಂ ಅವರು ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ ಅಂತಾ ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.ಸ್ಟಾಲಿನ್ ವಿರುದ್ಧ ಒಂದೇ ಒಂದು ಮಾತನಾಡಿಲ್ಲ, ಸರಿಯಾಗಿ ವಾದ ಮಾಡಲಿಲ್ಲ. ಸಚಿವರು ಇಲ್ಲೇ ಗೂಟಾ ಹೊಡೆದುಕೊಂಡು ಕೂತಿದ್ರು. ತಮಿಳುನಾಡಿನವರು ಹೋದ ಮೇಲೆ ಬೂಟಾಟಿಕೆಗೆ ಈಗ ದೆಹಲಿಗೆ ಹೋಗಿದ್ದಾರೆ ಅಂತಾ ಕೆಂಡಕಾರಿದ್ರು. ಕಾವೇರಿ ವಿಚಾರದಲ್ಲಿ ಕರ್ನಾಟಕ ಸರ್ಕಾರ ಫಾಲೋ ದಿ ಲೀಡರ್. ಸ್ಟಾಲಿನ್ ಫಾಲೋ ಮಾಡಿದ್ರು ಅಷ್ಟೇ. ರೈಲು ಹೋದ್ಮೇಲೆ ಟಿಕೆಟ್ ತಗೊಂಡ್ರು ಟ್ರೈನ್ ಸಿಗುತ್ತಾ ಈಗ..!? ಅಂತಾ ಅಶೋಕ್ ವ್ಯಂಗ್ಯವಾಡಿದ್ರು. ಇದನ್ನೂ ಓದಿ: ಕಾವೇರಿ ನೀರು ಹಂಚಿಕೆ – ಕೇಂದ್ರ ಜಲ ಶಕ್ತಿ ಸಚಿವರ ಪ್ರತಿಕ್ರಿಯೆ ಸಕಾರಾತ್ಮಕ: ಸಿದ್ದರಾಮಯ್ಯವಾದ ಸರಿಯಾಗಿ ಮಾಡಲಿಲ್ಲ, ತಜ್ಞರ ಸಂಪರ್ಕ ಮಾಡಲಿಲ್ಲ, ಏನೂ ಮಾಡಲಿಲ್ಲ ಇವರು. ಸ್ಟಾಲಿನ್ ಕೋಪ ಮಾಡಿಕೊಳ್ತಾರೆ ಅಂತಾ ಏನೂ ಮಾಡಲಿಲ್ಲ. ಕಾವೇರಿ ಪಾಲಿಗೆ ಇದು ದುರಾದೃಷ್ಟ ಸರ್ಕಾರ ಅಂತಾ ಅಶೋಕ್ ವಾಗ್ದಾಳಿ ನಡೆಸಿದ್ರು.Web Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 




















Sign in to your account
Username or Email Address


Password

 Remember Me


