ಬೆಂಗಳೂರು: ಸಿಎಂ ಸಿದ್ದರಾಮಯ್ಯ ಹೇಳಿದಂತೆ ಕಾಂತರಾಜು ವರದಿಯನ್ನು (Kantharaju Report) ಸರ್ಕಾರ ಸ್ವೀಕಾರ ಮಾಡಲಿದೆ ಎಂದು ಹಿಂದುಳಿದ ವರ್ಗಗಳ ಸಚಿವ ಶಿವರಾಜ್ ತಂಗಡಗಿ (Shivaraj Tangadagi) ತಿಳಿಸಿದ್ದಾರೆ.ವಿಕಾಸಸೌಧದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ (Siddaramaiah) ಅವರು ಈಗಾಗಲೇ ವರದಿ ಸ್ವೀಕಾರ ಮಾಡುತ್ತೇವೆ ಎಂದು ಹೇಳಿದ್ದಾರೆ. ಅವರು ಹೇಳಿದ ಮೇಲೆ ನಾನು ಹೇಳುವುದು ಏನು ಇಲ್ಲ. ಇಲಾಖೆ ಸಚಿವನಾಗಿ ವರದಿ ಸ್ವೀಕಾರ ಮಾಡುತ್ತೇನೆ ಎಂದರು. ಕಾಂತರಾಜು ವರದಿಯನ್ನು ಸ್ವೀಕಾರ ಮಾಡದಂತೆ ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಪತ್ರ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ‌ ಅವರು, ಇಲ್ಲಿವರೆಗೂ ಯಾವುದೇ ಪತ್ರ ಬಂದಿಲ್ಲ. ಶಿವಕುಮಾರ್ ಅವರು ಬರೆದಿದ್ದರೂ ನನಗೆ ಅ ಪತ್ರ ತಲುಪಿಲ್ಲ. ಪತ್ರ ಬಂದ ಮೇಲೆ ಸಿಎಂ, ಡಿಸಿಎಂ ಜೊತೆ ಮಾತನಾಡಿ ಮುಂದಿನ ತೀರ್ಮಾನ ಮಾಡುತ್ತೇನೆ. ಅಧಿಕೃತವಾಗಿ ಪತ್ರ ನನಗೆ ಬಂದಿಲ್ಲ.ಪತ್ರ ಬಂದ ಮೇಲೆ ಡಿಸಿಎಂ ಜೊತೆಗೂ ಮಾತನಾಡಿ ಅವರ ಬಳಿ ಮಾಹಿತಿ ಪಡೆಯುತ್ತೇನೆ ಎಂದರು.ಕಾಂತರಾಜು ವರದಿ ಇನ್ನು‌ ಸ್ವೀಕಾರ ಆಗಿಲ್ಲ. ಅದರಲ್ಲಿ ಏನಿದೆಯೋ ನನಗೂ‌ ಗೊತ್ತಿಲ್ಲ. ಸಿದ್ದರಾಮಯ್ಯ ಸರ್ಕಾರ ಜನಗಣತಿ ಮಾಡಿತ್ತು. ಆರ್ಥಿಕವಾಗಿ,ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮಾಹಿತಿ ಅರಿಯಲು ಸಮೀಕ್ಷೆ ಮಾಡಲಾಗಿತ್ತು. ಸಿದ್ದರಾಮಯ್ಯ ಅವರು ಈಗಾಗಲೇ ವರದಿ ಸ್ವೀಕಾರ ಮಾಡುತ್ತೇವೆ ಅಂತ ಹೇಳಿದ್ದಾರೆ. ಅದನ್ನು ಸ್ವೀಕಾರ ಮಾಡಿ ಅಧ್ಯಯನ ಮಾಡಿದ ಮೇಲೆ ಅದರ ವಾಸ್ತವ ತಿಳಿಯುತ್ತದೆ. ನಾನು ಇಲಾಖೆ ಮಂತ್ರಿ ಮಾತ್ರ. ಅಂತಿಮವಾಗಿ ಸಿಎಂ, ಡಿಸಿಎಂ ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಅಂದು ಗರ್ಭಿಣಿ, ಇದೀಗ ಮದುವೆ: ಸಾಯಿ ಪಲ್ಲವಿ ಫೋಟೋ ವೈರಲ್ Web Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 




















Sign in to your account
Username or Email Address


Password

 Remember Me


