ಬೆಂಗಳೂರು: ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಎರಡನೇ ಸುತ್ತಿ‌ನ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಸೆ.8ರಿಂದ ಆರಂಭಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.ಅಂದು ಬೆಳಿಗ್ಗೆ 11ಕ್ಕೆ ಹಂಚಿಕೆಗೆ ಲಭ್ಯ ಇರುವ ಸೀಟುಗಳ ವಿವರವನ್ನು ಪ್ರಕಟಿಸಲಾಗುತ್ತದೆ. ಮಧ್ಯಾಹ್ನ 2ರಿಂದ ಸೆ.11ರವರೆಗೆ ‘ಆಯ್ಕೆ’ (Options) ಗಳನ್ನು ಬದಲಿಸಿಕೊಳ್ಳಲು ಅವಕಾಶ ಇರುತ್ತದೆ. ರಾಷ್ಟೀಯ ಮಟ್ಟದ ನೀಟ್ (NEET) ಫಲಿತಾಂಶ ನೋಡಿಕೊಂಡು ಎರಡನೇ ಸುತ್ತಿನ ಫಲಿತಾಂಶ ದಿನಾಂಕವನ್ನು‌ ನಂತರ ತಿಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.#UGCET #UGNEET-24 ಎರಡನೇ ಸುತ್ತಿನ ಸೀಟು ಹಂಚಿಕೆಯ ವೇಳಾಪಟ್ಟಿ ಪ್ರಕಟಿಸಲಾಗಿದೆ. ಸೆ.8ಕ್ಕೆ ಸೀಟ್ ಮ್ಯಾಟ್ರಿಕ್ಸ್ ಪ್ರಕಟಿಸಲಾಗುತ್ತದೆ. ಸೆ.9ಕ್ಕೆ Caution Deposit ಪಾವತಿಸಬೇಕು. ಸೆ.8ರಿಂದ 11ರವರೆಗೆ Options ಬದಲಿಸಿಕೊಳ್ಳಲು ಅವಕಾಶ ನೀಡಲಾಗಿದೆ.@CMofKarnataka@drmcsudhakar pic.twitter.com/DvwWXV11rn— KEA (@KEA_karnataka) September 6, 2024ನೀಟ್‌ಗೆ ಸಂಬಂಧಿಸಿದಂತೆ ಎರಡನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟಣೆ ನಂತರ ಅಭ್ಯರ್ಥಿಗಳಿಗೆ ಯಾವುದೇ ಛಾಯ್ಸ್‌ಗಳನ್ನ ಆಯ್ಕೆ ಮಾಡಲು ಅವಕಾಶ ಇರುವುದಿಲ್ಲ. ಈ ಹಂತದಲ್ಲಿ ಹಂಚಿಕೆಯಾದ ಸೀಟಿಗೆ ಪ್ರವೇಶ ಪಡೆಯುವುದು ಕಡ್ಡಾಯವಾಗಿರುತ್ತದೆ. ಒಂದು ವೇಳೆ ಶುಲ್ಕ ಪಾವತಿಸಿ, ಕಾಲೇಜಿಗೆ ಪ್ರವೇಶ ಪಡೆಯದಿದ್ದರೆ ಅಂತಹವರು ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಹೀಗಾಗಿ ಅಭ್ಯರ್ಥಿಗಳು ಇಷ್ಟ ಇರುವ ಕಾಲೇಜುಗಳನ್ನು ಮಾತ್ರ ದಾಖಲಿಸಬೇಕು‌ ಎಂದು ಅವರು ಸಲಹೆ ನೀಡಿದ್ದಾರೆ.ಯುಜಿ ಸಿಇಟಿಗೆ ಸಂಬಂಧಿಸಿದಂತೆ ಎರಡನೇ ಸುತ್ತಿನ ಸೀಟು‌ ಹಂಚಿಕೆಯ ಫಲಿತಾಂಶದ ನಂತರ ಅಭ್ಯರ್ಥಿಗಳು ತಮಗೆ ಇಷ್ಟ ಇರುವ ಯಾವುದಾದರೊಂದು‌ ಛಾಯ್ಸ್ ಆಯ್ಕೆ‌ ಮಾಡಿಕೊಳ್ಳಬಹುದು. ಈ ಕುರಿತು ಸದ್ಯದಲ್ಲೇ ವಿವರಗಳನ್ನು ನೀಡಲಾಗುವುದು ಎಂದು‌ ತಿಳಿಸಿದ್ದಾರೆ.ಮೂಲ ದಾಖಲೆ ಸಲ್ಲಿಕೆ
ಯುಜಿ ನೀಟ್ ನ ಮೊದಲ ಸುತ್ತಿನಲ್ಲಿ ಖಾಸಗಿ‌ ಕಾಲೇಜುಗಳಲ್ಲಿ ಸರ್ಕಾರಿ‌ ಕೋಟಾದ ವೈದ್ಯಕೀಯ ಸೀಟು ಪಡೆದಿರುವ ಅಥವಾ ಖಾಸಗಿ ಕೋಟಾದ ಸೀಟುಗಳನ್ನು ಖಾಸಗಿ ಕಾಲೇಜುಗಳಲ್ಲಿ ಪಡೆದವರು ಮೂಲ ದಾಖಲೆಗಳನ್ನು ಸೆ.9ರಿಂದ 12ರವರೆಗೆ ಕೆಇಎಗೆ ಸಲ್ಲಿಸಬೇಕು ಎಂದು ಅವರು ಕೋರಿದ್ದಾರೆ. ಛಾಯ್ಸ್-2 ಆಯ್ಕೆ ಮಾಡಿ ಶುಲ್ಕ ಪಾವತಿಸಿರುವ ಅಭ್ಯರ್ಥಿಗಳು ಕೂಡ ಈ ದಿನಾಂಕಗಳಂದು ಮೂಲ ದಾಖಲೆ ಸಲ್ಲಿಸಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.Sign in to your account
Username or Email Address


Password

 Remember Me


