ಉಡುಪಿ: ಚೈತ್ರಾ ಕುಂದಾಪುರ (Chaitra Kundapura) 5 ಕೋಟಿ ಡೀಲ್ ಪ್ರಕರಣಕ್ಕೆ ಸಂಬಂಧ ದಿನಕ್ಕೊಂದು ತಿರುವು ಪಡೆಯುತ್ತಿರುವ ಬೆನ್ನಲ್ಲೇ ಉದ್ಯಮಿ ಗೋವಿಂದ ಪೂಜಾರಿ ವಿರುದ್ಧ ಗಗನ್ (Gagan Kadoor) ಪೊಲೀಸ್ ಠಾಣೆ ಮಟ್ಟಿಲೇರಿದ್ದಾನೆ.ದೂರಿನ ಪತ್ರ ಬರೆದು ಗಗನ್, ಚಿಕ್ಕಮಗಳೂರು ಜಿಲ್ಲೆ ಕಡೂರು ಠಾಣೆಗೆ ರವಾನಿಸಿದ್ದಾನೆ. ನನಗೂ ಪತ್ನಿಗೂ ಗೋವಿಂದ ಬಾಬು ಪೂಜಾರಿಯಿಂದ ಜೀವಬೆದರಿಕೆ ಇದೆ ಎಂದು ಪತ್ರದಲ್ಲಿ ತಿಳಿಸಿದ್ದಾನೆ.ಪತ್ರದಲ್ಲೇನಿದೆ..?: ಕಡೂರು ನಿವಾಸಿಯಾಗಿರುವ ನಾನು ಹಲವು ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯ ಕಾರ್ಯಕರ್ತನಾಗಿ ಕೆಲಸ ನಿರ್ವಹಿಸುತ್ತಿದ್ದು ರಾಜಕೀಯವಾಗಿ ಹಾಗೂ ಸಾಮಾಜಿಕ ತೊಡಗಿಸಿಕೊಂಡಿದ್ದೇನೆ. ನನಗೆ ಕಳೆದ ಕೆಲವು ವರ್ಷಗಳಿಂದ ಗೋವಿಂದ ಬಾಬು ಪೂಜಾರಿ ಎನ್ನುವ ಬೈಂದೂರು ಮೂಲದ ಉದ್ಯಮಿ ಪರಿಚಯವಿದ್ದ ನನ್ನನ್ನು ಆತ್ಮೀಯವಾಗಿ ನೋಡಿಕೊಳ್ಳುತ್ತಿದ್ದರು. ಕಳೆದ 4-5 ತಿಂಗಳ ಹಿಂದೆ ನನ್ನ ಮದುವೆಯ ಸಂದರ್ಭದಲ್ಲಿ ನಾನು ಮದುವೆ ಆಮಂತ್ರಣ ನಿಡಲು ಬೆಂಗಳೂರಿನಲ್ಲಿರುವ ಅವರ ಕಚೇರಿಗೆ ತೆರಳಿದ್ದಾಗ ಅವರು ಮದುವೆಯ ಖರ್ಚಿಗೆಂದು 50 ಸಾವಿರ ರೂ. ನೀಡಿದ್ದರು. ಇದನ್ನೂ ಓದಿ: ಗೋವಿಂದ ಬಾಬು ಪೂಜಾರಿಗೆ ಬೈದಿದ್ದೇನೆ: ಸೂಲಿಬೆಲೆ ಫಸ್ಟ್ ರಿಯಾಕ್ಷನ್ಆ ಹಣವನ್ನು ಸಕಾಲದಲ್ಲಿ ನನಗೆ ಹಿಂದಿರುಗಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ನಾನು ಅವರ ಬಳಿ ಸಮಯವಕಾಶ ಕೇಳುತ್ತಿದ್ದೆ. ಆದರೆ ಅವರು ನನ್ನ ಗೆಳತಿಗೆ ಕರೆ ಮಾಡಿ ನನ್ನ ಹಾಗೂ ನನ್ನ ಹೆಂಡತಿಯನ್ನು ಎತ್ತಾಕ್ಕೊಂಡು ಹೋಗುವುದಾಗಿ ಬೆದರಿಕೆ ಹಾಕಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ನನ್ನ ಗೆಳತಿಯೊಂದಿಗೆ ಮಾತನಾಡಿರುವ ಕಾಲ್ ರೆಕಾರ್ಡ್ ಸಾಕ್ಷಿಯಾಗಿ ಒದಗಿಸಿರುತ್ತೇನೆ. ಹೀಗಾಗಿ ನನಗೂ ನನ್ನ ಹೆಂಡ್ತಿಗೂ ಸೂಕ್ತ ರಕ್ಷಣೆ ಹಾಗೂ ಗೋವಿಂದ ಬಾಬು ಪೂಜಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಗಗನ್ ವಿನಂತಿಸಿದ್ದಾನೆ.Web Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 




















Sign in to your account
Username or Email Address


Password

 Remember Me


