ಹಾವೇರಿ: ಕಳೆದ ತಿಂಗಳು ಆಗಸ್ಟ್ 29 ರಂದು ನಡೆದ ಪಟಾಕಿ ಅಂಗಡಿಯ ಅಗ್ನಿ ದುರಂತದಲ್ಲಿ ಒಂದೇ ಗ್ರಾಮದ ಮೂವರು ಯುವಕರು ಮೃತಪಟ್ಟಿದ್ದರು. ಆ ಯುವಕರ ಸ್ವಗ್ರಾಮ ಹಾವೇರಿ ತಾಲೂಕಿನ ಕಾಟೇನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ಪಟಾಕಿ (Firecracker) ಹಚ್ಚದೆ ಗಣಪತಿ ಹಬ್ಬವನ್ನು (Ganesh Chaturthi) ಸರಳವಾಗಿ ಆಚರಣೆ ಮಾಡಿದ್ದಾರೆ.ಗ್ರಾಮದ ದೇವಸ್ಥಾನದಿಂದ ಗ್ರಾಮದ ಶಾಲೆಗೆ ಗಣಪತಿಯ ಮೆರವಣಿಗೆಯಲ್ಲಿ ಪಟಾಕಿ ಬಳಕೆ ಮಾಡದೆ ತಂದಿದ್ದಾರೆ. ಸಪ್ಟೆಂಬರ್ 29 ರಂದು ಹಾವೇರಿಯ ಆಲದಕಟ್ಟಿ ಪಟಾಕಿ ಅಂಗಡಿಯಲ್ಲಿ ಒಂದೇ ಗ್ರಾಮದ ಯುವಕರಾದ, ಶಿವಲಿಂಗ ಅಕ್ಕಿ, ರಮೇಶ ಬಾರ್ಕಿ, ದ್ಯಾಮಪ್ಪ ಓಲೇಕಾರ ಮೃತಪಟ್ಟಿದ್ದರು. ಈ ಮೂವರು ಕಾಟೇನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳು. ಹಳೆ ವಿದ್ಯಾರ್ಥಿಗಳ ಸ್ಮರಣಾರ್ಥ ಪಟಾಕಿ ಹಚ್ಚದೆ ಗಣೇಶ ಹಬ್ಬವನ್ನು ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಇದನ್ನೂ ಓದಿ: ದೇಶದ ಶ್ರೀಮಂತ ಗಣೇಶನಿಗೆ ಬರೋಬ್ಬರಿ 360 ಕೋಟಿ ಇನ್ಶುರೆನ್ಸ್‌; 69 ಕೆಜಿ ಚಿನ್ನ, 336 ಕೆಜಿ ಬೆಳ್ಳಿ ಅಲಂಕಾರಗ್ರಾಮದ ಬಹುತೇಕ ಜನರು ಪಟಾಕಿ ಬಳಸದೆ ಗಣೇಶ ಪ್ರತಿಷ್ಠಾಪನೆ ಮಾಡಿ, ಪಟಾಕಿ ದುರಂತದಲ್ಲಿ ಮೃತಪಟ್ಟ ಯುವಕರಿಗೆ, ಸರಳವಾಗಿ ಗಣೇಶ ಹಬ್ಬ ಆಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿದರು. ಇದನ್ನೂ ಓದಿ: ಗಣೇಶ ಹಬ್ಬದಂದು ಮಗ ಮನೆಗೆ ಬಂದಿದ್ದಾನೆ- ಧ್ರುವ ಸರ್ಜಾWeb Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 




















Sign in to your account
Username or Email Address


Password

 Remember Me


