ಬೆಂಗಳೂರು: ಸೂರ್ಯನ ಬ್ಯಾಹ್ಯ ವಾತಾವರಣ ಅಧ್ಯಯನಕ್ಕೆ ಭಾರತೀಯ ಬ್ಯಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ (ISRO) ಗಣೇಶ ಚತುರ್ಥಿ ಹಬ್ಬದಂದೇ ಗುಡ್‌ನ್ಯೂಸ್‌ ಕೊಟ್ಟಿದೆ. ಸೂರ್ಯ ಶಿಕಾರಿಗೆ ಭೂಮಿಯಿಂದ ಹೊರಟ ಆದಿತ್ಯ ಎಲ್‌-1 (Aditya-L1 Mission) ನೌಕೆ ಈಗಾಗಲೇ 4ನೇ ಕಕ್ಷೆಯನ್ನು ಯಶಸ್ವಿಯಾಗಿ ತಲುಪಿದೆ.Aditya-L1 Mission:
Aditya-L1 has commenced collecting scientific data.The sensors of the STEPS instrument have begun measuring supra-thermal and energetic ions and electrons at distances greater than 50,000 km from Earth.This data helps scientists analyze the behaviour of… pic.twitter.com/kkLXFoy3Ri— ISRO (@isro) September 18, 2023ಇದೀಗ ನಿಗದಿತ ಕಕ್ಷೆ (L1 ಪಾಯಿಂಟ್‌) ಸೇರುವುದಕ್ಕೂ ಮುನ್ನವೇ ವೈಜ್ಞಾನಿಕ ದತ್ತಾಂಶ (Scientific Data) ಕಳುಹಿಸಲು ಪ್ರಾರಂಭಿಸಿದೆ. ಈ ಕುರಿತು ಇಸ್ರೋ ತನ್ನ ಟ್ವಿಟ್ಟರ್‌ X ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: Aditya L1: ಮೊದಲ ಕಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಆದಿತ್ಯ ನೌಕೆ – ಸೂರ್ಯನತ್ತ ಮತ್ತೊಂದು ಹೆಜ್ಜೆಸೂರ್ಯನ ಬಾಹ್ಯ ವಾತಾವರಣ ಅಧ್ಯಯನಕ್ಕೆ ಕಳುಹಿಸಿರುವ ಆದಿತ್ಯ-ಎಲ್‌1 ವೈಜ್ಞಾನಿಕ ದತ್ತಾಂಶಗಳನ್ನ ಸಂಗ್ರಹಿಸಲು ಪ್ರಾರಂಭಿಸಿದೆ. STEPS ಉಪಕರಣದ ಸಂವೇದಕಗಳು (ಸೆನ್ಸಾರ್‌ಗಳು) ಭೂಮಿಯಿಂದ 50,000 ಕಿಮೀಗಿಂತ ಹೆಚ್ಚಿನ ದೂರದಲ್ಲಿ ಸೂಪರ್-ಥರ್ಮಲ್ ಮತ್ತು ಶಕ್ತಿಯುತ ಅಯಾನುಗಳು (Energetic Ions) ಮತ್ತು ಎಲೆಕ್ಟ್ರಾನ್‌ಗಳನ್ನು ಅಳೆಯಲು ಪ್ರಾರಂಭಿಸಿದೆ. ಈ ಡೇಟಾವು ವಿಜ್ಞಾನಿಗಳಿಗೆ ಭೂಮಿಯ ಸುತ್ತಲಿನ ಕಣಗಳ ನಡವಳಿಕೆಯನ್ನ ವಿಶ್ಲೇಷಿಸಲು ಸಹಾಯ ಮಾಡುತ್ತದೆ. ಜೊತೆಗೆ ಅಂಕಿ ಅಂಶವು ಒಂದು ಘಟಕದಿಂದ ಸಂಗ್ರಹಿಸಲಾದ ಶಕ್ತಿಯುತ ಕಣ ಪರಿಸರದಲ್ಲಿ ವ್ಯತ್ಯಾಸಗಳನ್ನೂ ತೋರಿಸುತ್ತದೆ ಎಂದು ತಿಳಿಸಿದೆ.ಚಂದ್ರಯಾನ-3 ಯಶಸ್ಸಿನ ಬಳಿಕ ಸೂರ್ಯನ ಅಧ್ಯಯನಕ್ಕೆ ಇಸ್ರೋ ಆದಿತ್ಯ-ಎಲ್‌1 ಬಾಹ್ಯಾಕಾಶ ನೌಕೆಯನ್ನು ಸೆ.2 ರಂದು ಉಡಾವಣೆ ಮಾಡಿತ್ತು. ನೌಕೆಯು ಸೆ.10 ರಂದು 3ನೇ ಕಕ್ಷೆ ಹಾಗೂ ಸೆಪ್ಟೆಂಬರ್‌ 14ರಂದು 4ನೇ ಕಕ್ಷೆಗೆ ಸೇರುವ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರೈಸಿತ್ತು. ಇದನ್ನೂ ಓದಿ: Aditya-L1: ಆದಿತ್ಯ ನೌಕೆ 4ನೇ ಕಕ್ಷೆ ಬದಲಾವಣೆ ಪ್ರಕ್ರಿಯೆ ಯಶಸ್ವಿ – ಮುಂದಿನ ಹಂತ ‘ಭೂಮಿಯಿಂದ ಬೀಳ್ಕೊಡುಗೆ’Web Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 




















Sign in to your account
Username or Email Address


Password

 Remember Me


