ಸ್ಯಾಂಡಲ್‌ವುಡ್ ನಟ ವಿಜಯ ರಾಘವೇಂದ್ರ (Vijay Raghavendra) ಅವರ ಪತ್ನಿ ಸ್ಪಂದನಾ (Spandana) ಅಗಲಿ ಒಂದು ತಿಂಗಳು ಕಳೆದಿದೆ. ವಿಜಯ ಕುಟುಂಬಕ್ಕೆ, ಆಪ್ತರಿಗೆ ಸ್ಪಂದನಾ ಅಗಲಿಕೆಯ ಶಾಕ್‌ನಿಂದ ಇನ್ನೂ ಹೊರಬಂದಿಲ್ಲ. ಈ ವೇಳೆ ‘ಭೂಮಿಗೆ ಬಂದ ಭಗವಂತ’ ಸೀರಿಯಲ್ ನಟ ನವೀನ್ ಕೃಷ್ಣ (Naveen Krishna) ಸ್ಪಂದನಾ ವಿಜಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.ಸ್ಪಂದನಾ ನಿರ್ಮಾಣದ (Produce) ವಿಜಯ ನಟನೆಯ ‘ಕಿಸ್ಮತ್’ (Kismat Film) ಸಿನಿಮಾದಲ್ಲಿ ನವೀನ್ ಕೃಷ್ಣ (Naveen Krishna) ಅವರು ಕೆಲಸ ಮಾಡಿದ್ದಾರೆ. ಚಿತ್ರಕ್ಕೆ ಸಂಭಾಷಣೆಯನ್ನ ಬರೆದಿದ್ದಾರೆ. ಈ ವೇಳೆ ರಾಘು ಅವರಿದ್ದ ಸ್ಪಂದನಾ ಮೇಲಿನ ಪ್ರೀತಿ, ಗೌರವದ ಬಗ್ಗೆ ನವೀನ್ ಕೃಷ್ಣ ಬಿಚ್ಚಿದ್ದಾರೆ. ಇದನ್ನೂ ಓದಿ:‘ಕಂಬಳ’ ಉದ್ಘಾಟನೆಗಾಗಿ ಬೆಂಗಳೂರಿಗೆ ಆಗಮಿಸಲಿದ್ದಾರೆ ಅನುಷ್ಕಾ ಶೆಟ್ಟಿ‘ಕಿಸ್ಮತ್’ ಚಿತ್ರಕ್ಕೆ ನಾನೇ ಸಂಭಾಷಣೆ ಬರೆದಿದ್ದೆ, ಸ್ಪಂದನಾ ಅವರಿಲ್ಲ ಅಂತಾ ನಾನು ಅನಿಸಿಕೊಳ್ಳೋಕೆ ನಾನು ಇಷ್ಟಪಡಲ್ಲ. ಅವರ ನಿಧನರಾದ ದಿನದಿಂದ ರಾಘು ಹತ್ತಿರ ನಾನು ಮಾತನಾಡಲಿಲ್ಲ. ಆ ಧೈರ್ಯ ನನಗಿಲ್ಲ. ರಾಘು, ಮಗ ಶೌರ್ಯ ಅವರು ಸಂತೋಷವಾಗಿರಲಿ ಎಂದು ಆಶಿಸುತ್ತೇನೆ. ಆದರೆ ಅವರ ನೋವು ಏನೀದೆ ಅದು ಮಾಯ ಆಗಲ್ಲ. ಆದರೂ ಜೀವನ ಮುಂದೆವರಿಯಬೇಕು. ಹಾಗಾಗಿ ರಾಘುಗೆ ಟೇಕ್ ಕೇರ್ ಎಂದು ಹೇಳುತ್ತೇನೆ.‘ಕಿಸ್ಮತ್’ ಚಿತ್ರದಲ್ಲಿ ನಾನು ಡೈಲಾಗ್ ಬರಿಬೇಕಾದ್ರೆ, ಆ್ಯಕ್ಚುಲಿ ಹೀರೋಯಿನ್‌ಗೆ ಸ್ಪಂದನಾ ಎಂದು ಹೆಸರಿಟ್ಟೆ. ಡೈಲಾಗ್ ಕೊಡುವಾಗ ವಿಜಯ ಸಖತ್ ಎಂಜಾಯ್ ಮಾಡಿ ಹೇಳ್ತಿದ್ದರು. ಆ ಹೀರೋಯಿನ್‌ಗೆ ಬೇರೆ ಪಾತ್ರಧಾರಿ ಫ್ಲರ್ಟ್ ಮಾಡೋ ತರಹ ಸೀನ್ ಇತ್ತು. Hai Baby Whats Your Name ಎಂದು ಕೇಳ್ತಾನೆ. ಹೀರೋಯಿನ್ ಸ್ಪಂದನಾ ಎನ್ನುತ್ತಾರೆ. ಆತ ನೋ ಡೌಂಟ್ ಯು ಸೋ ಬ್ಯೂಟಿಫುಲ್, ನಿಮ್ಮ ಹೆಸರಲ್ಲೇ ಸ್ಪಾ.. ಇದೆ ಎಂದು ಡೈಲಾಗ್ ಹೊಡಿತ್ತಾನೆ.ಈ ಡೈಲಾಗ್ ರಾಘು ಕೇಳಿ, ಹೇ ಬೇಡ ಬೇಡ ನನ್ನ ಹೆಂಡ್ತಿ ಹೆಸರನ್ನ ಹೀರೋಯಿನ್‌ ಇಡಬೇಡ ಅಂದಿದ್ರು. ಎಷ್ಟು ಚೆನ್ನಾಗಿದೆ ಈ ಡೈಲಾಗ್ ಹೇಳಿದ್ರೆ ಎನಾಗುತ್ತೆ ಎಂದು ಹೇಳಿದ್ದೆ. ಅದಕ್ಕೆ ರಾಘು ನನ್ನ ಹೆಂಡ್ತಿ ಕೇಳಿ ಬೈತಾರೆ ಬೇಡ ಅಂದಿದ್ದರು. ಅವತ್ತು ಹೀರೋಯಿನ್‌ ಹೆಸರನ್ನ ಚೇಂಜ್ ಮಾಡಿದ್ವಿ.ಈ ಘಟನೆ ನಡೆದ ಮೇಲೆ ಸ್ಪಂದನಾನೇ ಬಂದು ತುಂಬಾ ಚೆನ್ನಾಗಿ ಸಂಭಾಷಣೆ ಬರೆದಿದ್ದೀರಾ ಎಂದು ಹೇಳಿದ್ದರು. ನನ್ನ ಕೆಲಸಕ್ಕೆ ಸ್ಪಂದನಾ ಬೆಂಬಲಿಸಿದ್ದರು. ತುಂಬಾ ಒಳ್ಳೆಯ ಹೆಣ್ಣು ಮಗಳು, ಒಳ್ಳೆಯ ಗೃಹಿಣಿ, ಎಲ್ಲಾ ರೀತಿಯ ಒಳ್ಳೆಯತನ ಇದ್ದಂತಹ ಹೃದಯ ಸ್ಪಂದನಾ ಅವರದ್ದು. ಆದರೆ ಇವತ್ತು ಅವರು ನಮ್ಮ ಜೊತೆ ಇಲ್ಲ ಎಂದು ನಟ ನವೀನ್ ಕೃಷ್ಣ ಭಾವುಕರಾಗಿದ್ದಾರೆ.ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ (Spandana) ಆಗಸ್ಟ್ 6ರಂದು ಥೈಲ್ಯಾಂಡ್‌ನಲ್ಲಿ ಹೃದಯಾಘಾತದಿಂದ (Heart Attack) ನಿಧನರಾದರು. ಆಗಸ್ಟ್ 9ರಂದು ಬೆಂಗಳೂರಿನ ಹರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯಕ್ರಿಯೆ ನಡೆಯಿತು.ಶೃತಿ ನಾಗೇಶ್‌, ಪಬ್ಲಿಕ್‌ ಟಿವಿ ಡಿಜಿಟಲ್‌ 





















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 




















Sign in to your account
Username or Email Address


Password

 Remember Me


