ಬೆಂಗಳೂರು: ಚೈತ್ರಾ ಕುಂದಾಪುರ (Chaitra Kundapur) ವಂಚನೆ ಪ್ರಕರಣಕ್ಕೂ ಇಂದಿರಾ ಕ್ಯಾಂಟೀನ್‌ಗೂ (Indira Canteen) ಯಾವುದೇ ಸಂಬಂಧ ಇಲ್ಲ. ನನ್ನ ಉದ್ಯಮದಲ್ಲಿ ಇಂದಿರಾ ಕ್ಯಾಂಟೀನ್ ಕೇವಲ 10%. ಉಳಿದ 90% ಖಾಸಗಿ ಉದ್ಯಮದ್ದಾಗಿದೆ. ಇಂದಿರಾ ಕ್ಯಾಂಟೀನ್ ಬಿಲ್ ಬಗ್ಗೆ ನಾವು ಎಂದಿಗೂ ಅವರೊಂದಿಗೆ ಮಾತಾಡಿರಲಿಲ್ಲ ಎಂದು ಪ್ರಕರಣದ ದೂರುದಾರರಾದ ಉದ್ಯಮಿ, ಚೆಫ್ ಟ್ಯಾಕ್ ಕಂಪನಿಯ ಮಾಲೀಕ ಗೋವಿಂದ ಬಾಬು ಪೂಜಾರಿ (Govinda Babu Poojari) ಹೇಳಿಕೆ ನೀಡಿದ್ದಾರೆ.ದೂರವಾಣಿ ಕರೆ ಮೂಲಕ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಇಂದಿರಾ ಕ್ಯಾಂಟೀನ್ ವಿಚಾರ ಇಲ್ಲಿ ಬರಲ್ಲ. ಅವರು ಮೋಸ ಮಾಡಿರುವುದು ರಾಜಕೀಯ ವಿಚಾರವಾಗಿ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಸತ್ಯಾಸತ್ಯತೆ ಹೊರಗೆ ಬರಲಿ. ನನ್ನ ಬಳಿಯಿರೋ ಎಲ್ಲಾ ದಾಖಲೆಗಳನ್ನೂ ಕೊಡುತ್ತಿದ್ದೇನೆ. ಅವರು ನಮಗೆ ಪ್ಲ್ಯಾನ್ ಮಾಡಿ ಮೋಸ ಮಾಡಿದ್ದಾರೆ. ಅವರು ಯಾವ ಪಕ್ಷದವರೇ ಆಗಿರಲಿ, ಇನ್ನೊಂದು ಬಾರಿ ಇಂತಹ ಮೋಸ ಆಗಬಾರದು. ಇಂತಹವರಿಗೆ ಶಿಕ್ಷೆ ಆಗಲೇ ಬೇಕು ಎಂದಿದ್ದಾರೆ. ಇದನ್ನೂ ಓದಿ: ಎಲ್ಲಾ ದೊಡ್ಡೋರ ಹೆಸರೆಲ್ಲ ಹೊರಗಡೆ ಬರುತ್ತೆ: ಚೈತ್ರಾ ಕುಂದಾಪುರಸಿಸಿಬಿಗೆ ಎಲ್ಲಾ ರೀತಿಯ ದಾಖಲೆಗಳನ್ನು ನೀಡಿದ್ದೇನೆ. ಸಿಸಿ ಕ್ಯಾಮೆರಾ, ವೀಡಿಯೋ, ಆಡಿಯೋ ಎಲ್ಲಾ ನೀಡಿದ್ದೇನೆ. ನನ್ನ ಬಳಿ ಇನ್ನೂ ಸಾಕ್ಷಿಗಳಿವೆ, ಅವುಗಳನ್ನೂ ನೀಡಲಿದ್ದೇನೆ. ನಾನು ಬೆಳಗ್ಗಿನಿಂದ ರಾತ್ರಿವರೆಗೂ ದುಡಿದ ಹಣ, ಲಾಭವನ್ನೆಲ್ಲಾ ಒಟ್ಟುಗೂಡಿಸಿ 10 ಕೋಟಿ ರೂ. ನೀಡಿದ್ದೇನೆ. ಹೀಗಾಗಿ ಈ ಪ್ರಕರಣದಲ್ಲಿ ನಾನು ಯಾವುದೇ ಕಾರಣಕ್ಕೂ ಹಿಂದೆ ಸರಿಯೋ ಮಾತೇ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ಸುಲಭವಾಗಿ ಸಿಕ್ಕ 50 ಲಕ್ಷಕ್ಕೆ ಚೈತ್ರಾ ಫಿದಾ – 3.5 ಕೋಟಿಗೆ ಶುರುವಾದ ಪ್ಲಾನ್ 5 ಕೋಟಿಗೆ ಏರಿದ್ದೇ ರೋಚಕWeb Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 




















Sign in to your account
Username or Email Address


Password

 Remember Me


