ಚಿಕ್ಕಮಗಳೂರು: ನಗರದ (Chikkamagaluru) ಆಜಾದ್ ಪಾರ್ಕ್ ವೃತ್ತದಲ್ಲಿನ ನಗರಸಭೆ ಕಟ್ಟಡದಲ್ಲಿ ನೂತನವಾಗಿ ನಿರ್ಮಿಸಿರುವ ಜಿಮ್‍ಗೆ ನಮೋ ಎಂದು ನಾಮಕರಣ ಮಾಡಲು ನಗರಸಭೆ ಮುಂದಾಗಿದೆ. ಈ ನಿಲುವನ್ನು ಖಂಡಿಸಿ ನಗರಸಭೆ ವಿರೋಧ ಪಕ್ಷದ ಸದಸ್ಯರು ಹಾಗೂ ಕಾಂಗ್ರೆಸ್ (Congress) ಮುಖಂಡರು ಪ್ರತಿಭಟನೆ ನಡೆಸಿದ್ದಾರೆ.ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಗುತ್ತಿದ್ದಂತೆ ವಿಪಕ್ಷಗಳ ಸದಸ್ಯರು ಸಭೆಯನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಜಿಮ್‍ಗೆ ಜೈಭೀಮ್ ವ್ಯಾಯಾಮ ಶಾಲೆ ಎಂದು ನಾಮಕರಣ ಮಾಡಬೇಕೆಂದು ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ನಗರಸಭೆ ಅಧ್ಯಕ್ಷರಿಗೆ ಈ ಹಿಂದೆ ಮನವಿ ಸಲ್ಲಿಸಿದ್ದರು. ಆದರೆ ಈಗ ಜಿಮ್‍ಗೆ ನಮೋ ಎಂದು ಹೆಸರಿಡಲು ಮುಂದಾಗಿರುವ ವಿಚಾರವಾಗಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಅರ್ಧ ಬೆಂಗಳೂರಿಗೆ ಇಂದು ನೀರಿನ ಪೂರೈಕೆಯಲ್ಲಿ ವ್ಯತ್ಯಯನಗರಸಭೆಯ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಜೈಭೀಮ್ ಹೆಸರಿಗೆ ಮನ್ನಣೆ ನೀಡದೇ ಏಕಪಕ್ಷೀಯವಾಗಿ ನಮೋ ಜಿಮ್ ನಾಮಕರಣಕ್ಕೆ ನಿರ್ಣಯ ಕೈಗೊಂಡಿದ್ದಾರೆ. ಅವರು ಅಂಬೇಡ್ಕರ್ ವಿರೋಧಿಯಾಗಿದ್ದಾರೆ. ಅವರು ಕ್ಷಮೆ ಕೇಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.ಈ ವಿಚಾರವಾಗಿ ನಗರಸಭೆ ಅಧ್ಯಕ್ಷ ಪ್ರತಿಕ್ರಿಯೆ ನೀಡಿದ್ದು, ತುರ್ತು ಸಭೆ ಕರೆದು ಜೈ ಭೀಮ್ ಹೆಸರಿಡುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಚುನಾವಣಾ ಸಿಬ್ಬಂದಿಗೆ ಬೂತಲ್ಲೇ ಅಂಚೆ ಮತದಾನ ಕಡ್ಡಾಯWeb Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 




















Sign in to your account
Username or Email Address


Password

 Remember Me


