ಬೆಂಗಳೂರು: ಉತ್ತಮ ಶಿಕ್ಷಕರ (Best Teacher) ಆಯ್ಕೆ ವಿಚಾರದಲ್ಲಿ ಸರ್ಕಾರಕ್ಕೆ ದೂರು ಕೊಟ್ಟಿದ್ದು ಯಾರು? ಎಸ್‌ಡಿಪಿಐನವರು (SDPI) ದೂರು ಕೊಟ್ಟಿದ್ದಾರೆ. ಎಸ್‌ಡಿಪಿಐ ಕೇಳಿ ಈ ಸರ್ಕಾರ ನಡೆಯುತ್ತಿದೆಯಾ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಪ್ರಶ್ನಿಸಿದ್ದಾರೆ.ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಯಾರನ್ನೋ ಓಲೈಕೆ ಮಾಡುವ ಕಾರಣಕ್ಕೆ ಇವತ್ತು ಕುಂದಾಪುರ ಸರ್ಕಾರಿ ಕಾಲೇಜು ಪ್ರಾಂಶುಪಾಲ ರಾಮಕೃಷ್ಣರಿಗೆ ನೀಡಿದ್ದ ಉತ್ತಮ ಪ್ರಶಸ್ತಿ ತಡೆಹಿಡಿಯುವ ಕ್ರಮ ಕೈಗೊಂಡಿದ್ದು ಸರಿಯಲ್ಲ. ಶಾಲೆಗಳು ಪವಿತ್ರ ಸ್ಥಳಗಳು. ಮಕ್ಕಳ ಮನಸ್ಸಿನಲ್ಲಿ ಇಂಥ ಕುಚೋದ್ಯತನ ಹುಟ್ಟುಹಾಕುವ ಕೆಲಸ ಮಾಡಬಾರದು ಎಂದು ತಿಳಿಸಿದರು. ಇದನ್ನೂ ಓದಿ: ಎತ್ತಿನಹೊಳೆ ಯೋಜನೆಯಲ್ಲಿ ಭ್ರಷ್ಟಾಚಾರ- ಸಮಗ್ರ ಅಧ್ಯಯನ ವರದಿ ಪಡೆದು ಮುಂದುವರೆಯಿರಿ: ಸಿಎಂಗೆ ಸಿ.ಟಿ.ರವಿ ಆಗ್ರಹಹನುಮಾನ್ ವಿಚಾರದಲ್ಲೂ ಎಸ್‌ಡಿಪಿಐ ದೂರು ನೀಡಿತ್ತು. ನೀವು ಆದೇಶ ಮಾಡಿಬಿಟ್ಟಿರಿ. ಆದೇಶ ಮಾಡಲು ನಿಮಗೆ ಅಧಿಕಾರ ಕೊಟ್ಟಿದ್ದು ಯಾರು? ಒಬ್ಬ ತಹಶೀಲ್ದಾರರಿಗೆ ಅದನ್ನು ಮಾಡಲು ಅಧಿಕಾರ ಇದೆಯೇ? ಮತ್ತೆ ಆದೇಶ ವಾಪಸ್ ಪಡೆದಿರಿ. ಅಲ್ಲಿ ಶಾಂತಿ ಕದಡುವ ವಾತಾವರಣ ಸೃಷ್ಟಿ ಆಗುತ್ತಿತ್ತು. ಜನ ನಿಮಗೆ ಛೀಮಾರಿ ಹಾಕಲು ಪ್ರಾರಂಭಿಸಿದ್ದರು. ಅದಕ್ಕೆ ವಾಪಸ್ ಪಡೆದಿರಿ ಅಲ್ಲವೇ ಎಂದು ತಹಶೀಲ್ದಾರರನ್ನು ಸಸ್ಪೆಂಡ್ ಮಾಡಲು ಒತ್ತಾಯಿಸಿದರು. ಇದನ್ನೂ ಓದಿ: ಶಿಕ್ಷಕರ ಸಮಸ್ಯೆಗೆ ಶೀಘ್ರವೇ ಪರಿಹಾರ: ಸಿದ್ದರಾಮಯ್ಯಇಂಥವೆಲ್ಲ ಮಾಡುತ್ತಿದ್ದರೆ ಈ ರಾಜ್ಯವನ್ನು ಕಾಪಾಡುವವರು ಯಾರು? ನಾವು ಇರಬಹುದು, ನೀವು ಇರಬಹುದು, ಯಾರೇ ಇರಬಹುದು, ಸ್ವಲ್ಪ ದಿನಕ್ಕೆ ಅಧಿಕಾರದಲ್ಲಿ ಇರುತ್ತೇವೆ. ಆದರೆ ಸಾಂವಿಧಾನಿಕ ವ್ಯವಸ್ಥೆ ಬಿಟ್ಟು ನೀವೇನೇ ಮಾಡಿದರೂ ಕೂಡ ಶಾಂತಿ ಕದಡುವ ವಾತಾವರಣ ಸೃಷ್ಟಿ ಆಗುತ್ತದೆ. ಅಂಥ ಕೆಲಸ ಮಾಡದಿರಿ ಎಂದು ಸಲಹೆ ನೀಡಿದರು. ಇದನ್ನೂ ಓದಿ: Canada | ಅಲ್ಪ ಮತಕ್ಕೆ ಕುಸಿದ ಜಸ್ಟಿನ್‌ ಟ್ರುಡೊ ಸರ್ಕಾರ






 Advertisement 




Sign in to your account
Username or Email Address


Password

 Remember Me


