ಬಳ್ಳಾರಿ: ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದರ್ಶನ್‌ರನ್ನು (Darshan) ನೋಡಲು 2ನೇ ಬಾರಿ ಬಳ್ಳಾರಿ ಜೈಲಿಗೆ ಇಂದು (ಸೆ.5) ಪತ್ನಿ ವಿಜಯಲಕ್ಷ್ಮಿ (Vijaylakshmi) ಭೇಟಿ ನೀಡಿದ್ದಾರೆ.‌ ಇದನ್ನೂ ಓದಿ:ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಕಿತ್ತೆಸೆಯಬೇಕು- ಕಾಸ್ಟಿಂಗ್ ಕೌಚ್ ಬಗ್ಗೆ ಚೇತನ್ ಗರಂಚಾರ್ಜ್‌ಶೀಟ್ ಸಲ್ಲಿಕೆಯ ಬಳಿಕ ದರ್ಶನ್ ಭೇಟಿಗೆ ದಿನಕರ್ ತೂಗುದೀಪ್ ಜೊತೆ ವಿಜಯಲಕ್ಷ್ಮಿ ಬಳ್ಳಾರಿ ಜೈಲಿಗೆ ಭೇಟಿ ನೀಡಿದ್ದಾರೆ. ಈ ವೇಳೆ, ಹೈ ಸೆಕ್ಯೂರಿಟಿ ಸೆಲ್‌ನಿಂದ ಹೊರಬಂದ ಆರೋಪಿ ದರ್ಶನ್ ಪತ್ನಿ ಮತ್ತು ಸಹೋದರನನ್ನು ನೋಡಿ ಭಾವುಕರಾಗಿದ್ದಾರೆ.ಇನ್ನೂ ಈ ವೇಳೆ, ಬಳ್ಳಾರಿ ಸೆಂಟ್ರಲ್ ಜೈಲಿನ ಸಂದರ್ಶಕರ ಕೊಠಡಿಯಲ್ಲಿ ಸಹೋದರ ಮತ್ತು ಪತ್ನಿಯ ಜೊತೆ ದರ್ಶನ್ ಮಾತನಾಡಲು ಅರ್ಧ ಗಂಟೆ ಕಾಲಾವಕಾಶ ನೀಡಲಾಗಿದ್ದು, ಕಾನೂನು ಸಮರದ ಬಗ್ಗೆ ಚರ್ಚೆ ನಡೆಸಿದ್ದಾರೆ.Sign in to your account
Username or Email Address


Password

 Remember Me


