ಮಂಡ್ಯ: ತೀವ್ರ ವಿರೋಧದ ನಡುವೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಹೇಳಿದ ಹಾಗೆ ತಮಿಳುನಾಡಿಗೆ (Tamil Nadu) ರಾಜ್ಯ ಸರ್ಕಾರ 75,000 ಕ್ಯೂಸೆಕ್ ನೀರು ಬಿಟ್ಟಿದ್ದು ಆಗಿದೆ. ಇಂದು ಕಾವೇರಿ ನದಿ ನೀರು ನಿಯಂತ್ರಣಾ ಸಮಿತಿ ದೆಹಲಿಯಲ್ಲಿ (New Delhi) ಪ್ರಾಧಿಕಾರ ಕರ್ನಾಟಕ ಹಾಗೂ ತಮಿಳುನಾಡಿನ ನೀರು ಹಂಚಿಕೆಯ ವಿವಾದದ ಸಂಬಂಧ ಹೈವೋಲ್ಟೇಜ್ ಸಭೆ ನಡೆಸಲಿದೆ.ಕಳೆದ ಆಗಸ್ಟ್ 29ರಂದು ದೆಹಲಿಯಲ್ಲಿ ನಡೆದ ಕಾವೇರಿ ನೀರು ಪ್ರಾಧಿಕಾರ ಸಭೆಯಲ್ಲಿ ಕರ್ನಾಟಕ ಸರ್ಕಾರಕ್ಕೆ 15 ದಿನಗಳ ಕಾಲ ನಿತ್ಯ 5,000 ಕ್ಯೂಸೆಕ್ ಅಂದರೆ ಒಟ್ಟು 75,000 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡಬೇಕೆಂದು ಸೂಚನೆ ನೀಡಲಾಗಿತ್ತು. ಪ್ರಾಧಿಕಾರ ಸೂಚನೆಯಂತೆ ರಾಜ್ಯ ಸರ್ಕಾರ ರೈತರ ತೀವ್ರ ವಿರೋಧದ ನಡುವೆಯೂ ಹತ್ತೇ ದಿನಕ್ಕೆ ತಮಿಳುನಾಡಿಗೆ ಮಳೆ ನೀರು ಸೇರಿದಂತೆ ಕೆಆರ್‌ಎಸ್ ಡ್ಯಾಂನಿಂದ 75,000 ಕ್ಯೂಸೆಕ್ ನೀರು ಬಿಟ್ಟಿದೆ. ಸದ್ಯ ಕಾವೇರಿ ನೀರು ಹಂಚಿಕೆ ವಿವಾದದ ವಿಚಾರಣೆ ಸೆ.21ಕ್ಕೆ ಸುಪ್ರೀಂಕೋರ್ಟ್‌ನಲ್ಲಿ (Supreme Court) ನಡೆಯಲಿದೆ. ಇದನ್ನೂ ಓದಿ: ಡಿಕೆ ಬ್ರದರ್ಸ್‌ಗೆ ಠಕ್ಕರ್‌ – ಲೋಕಸಭೆಗೆ ಹೆಚ್‌ಡಿಕೆ ಸ್ಪರ್ಧೆ?ಈ ನಡುವೆ ಇಂದು ಕಾವೇರಿ ನೀರು ನಿಯಂತ್ರಣಾ ಸಮಿತಿ ದೆಹಲಿಯಲ್ಲಿ ಹೈವೋಲ್ಟೇಜ್ ಸಭೆ ನಡೆಸಲಿದೆ. ಈ ಸಭೆಯಲ್ಲಿ ಸಮಿತಿ ಅಧಿಕಾರಿಗಳು ಹಾಗೂ ಎರಡೂ ರಾಜ್ಯದ ನೀರಾವರಿ ತಜ್ಞರು, ವಕೀಲರು ಮತ್ತು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಇರಲಿದ್ದಾರೆ. ಆಗಸ್ಟ್ 29ರಂದು ನಡೆದ ಪ್ರಾಧಿಕಾರದ ಸಭೆಯಲ್ಲಿ ಆದ ನಿರ್ಣಯಗಳನ್ನು ಕರ್ನಾಟಕ ಸರ್ಕಾರ ಚಾಚು ತಪ್ಪದೇ ಪಾಲಿಸಿದೆ. ಹೀಗಿದ್ದರೂ ಸಹ ತಮಿಳುನಾಡು ನಮಗೆ ಈಗ ಬಿಟ್ಟಿರುವ ನೀರು ಸಾಲಲ್ಲ. ಇನ್ನೂ 10 ದಿನಗಳ ಕಾಲ 24,000 ಕ್ಯೂಸೆಕ್ ನೀರು ಹರಿಸುವಂತೆ ಬೇಡಿಕೆ ಇಡಲು ತಯಾರು ಮಾಡಿಕೊಂಡಿದೆ. ಇದನ್ನೂ ಓದಿ: ಋತುವಿನ ಸಮಸ್ಯೆ, 3 ದಿನ ಚಿಕಿತ್ಸೆ ಬಳಿಕ ಮಹಿಳೆ ಸಾವು – ಆಸ್ಪತ್ರೆ ವಿರುದ್ಧ ಸಂಬಂಧಿಕರ ಆಕ್ರೋಶಸದ್ಯದ ಪರಿಸ್ಥಿತಿಯಲ್ಲಿ ಈಗ ತಮಿಳುನಾಡಿಗೆ 75,000 ಕ್ಯೂಸೆಕ್ ನೀರು ಬಿಟ್ಟಿರುವುದೇ ದೊಡ್ಡ ವಿಚಾರ. ಈ ಮಧ್ಯೆ ತಮಿಳುನಾಡು ಇನ್ನೂ ಭಾರೀ ಪ್ರಮಾಣದ ನೀರು ಕೇಳಿರುವುದು ತಪ್ಪು. ಅದರಲ್ಲೂ ಪ್ರಾಧಿಕಾರವೂ ಸಹ ತಮಿಳುನಾಡಿನ ಮನವಿಯನ್ನು ನಿರಾಕರಿಸಬೇಕಾಗಿದೆ. ಈ ಬಗ್ಗೆ ಈಗಾಗಲೇ ಪ್ರಾಧಿಕಾರಕ್ಕೆ ಕರ್ನಾಟಕ ಸರ್ಕಾರ ಮನವರಿಕೆ ಮಾಡಿಕೊಟ್ಟಿದೆ. ಒಂದು ವೇಳೆ ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಳ್ಳದೇ ತಮಿಳುನಾಡಿಗೆ ನೀರು ಬಿಡಿ ಎಂದು ಹೇಳಿದರೆ ರಾಜ್ಯ ಸರ್ಕಾರ ಗಟ್ಟಿ ನಿರ್ಧಾರ ಮಾಡಿ ನಾವು ನೀರು ಬಿಡಲು ಆಗಲ್ಲ ಎಂದು ಕಡ್ಡಿ ತುಂಡು ಮಾಡಿದ ಹಾಗೆ ಹೇಳಬೇಕಾದ ಅನಿವಾರ್ಯತೆ ಇದೆ. ಏಕೆಂದರೆ ಸಕ್ಕರೆ ನಾಡು ಮಂಡ್ಯ (Mandya) ಜಿಲ್ಲೆಯ ಕೆಆರ್‌ಎಸ್ ಡ್ಯಾಂನಲ್ಲಿ (KRS Dam) ಇರೋದು ಕೇವಲ 98 ಅಡಿಗಳಷ್ಟೇ ನೀರು. ಟಿಎಂಸಿ ಲೆಕ್ಕಾಚಾರದಲ್ಲಿ ನೋಡುವುದಾದರೆ 21 ಟಿಎಂಸಿ ನೀರು ಅಷ್ಟೇ ಇರೋದು. ಈ ಪೈಕಿ 5 ಟಿಎಂಸಿ ಡೆಡ್ ಸ್ಟೋರೇಜ್ ಆಗಿರುವ ಕಾರಣ ಬಳಕೆಗೆ ಇರೋದು ಕೇವಲ 16 ಟಿಎಂಸಿ ನೀರು ಮಾತ್ರ. ಮಳೆ ಬಾರದೇ ಇದ್ದರೆ ಈ ನೀರು ಕುಡಿಯೋಕು ಸಾಲಲ್ಲ. ಇದನ್ನೂ ಓದಿ: ರಕ್ತಚಂದನ ಸಾಗಿಸ್ತಿದ್ದ ಕಾರು ಭೀಕರ ಅಪಘಾತಕ್ಕೆ ಜಖಂ – ಪವಾಡವೆಂಬಂತೆ ಪಾರಾದ ಕಳ್ಳರುಒಟ್ಟಾರೆ ಇಂದಿನ ಕಾವೇರಿ ನೀರು ನಿರ್ವಹಣಾ ಸಮಿತಿಯಲ್ಲಿ ತಮಿಳುನಾಡು ಬೇಡಿಕೆಯನ್ನು ಸಮಿತಿ ತಿರಸ್ಕಾರ ಮಾಡಬೇಕಿದೆ. ಒಂದು ವೇಳೆ ಪ್ರಾಧಿಕಾರ ಮತ್ತೆ ತಮಿಳುನಾಡಿಗೆ ನೀರು ಬಿಡಿ ಎಂದು ಹೇಳಿದರೆ ಕರ್ನಾಟಕ ಸರ್ಕಾರ ನಾವು ನೀರು ಬಿಡೋದೆ ಇಲ್ಲ ಎಂದು ಹೇಳಬೇಕಾದ ಅನಿವಾರ್ಯ ಹಾಗೂ ಅಗತ್ಯತೆ ಇದೆ. ಇದನ್ನೂ ಓದಿ: ಸರ್ಕಾರಿ ಬಸ್, ಕಾರು ಮುಖಾಮುಖಿ ಡಿಕ್ಕಿ – 9 ಮಂದಿಗೆ ಗಂಭೀರ ಗಾಯWeb Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 




















Sign in to your account
Username or Email Address


Password

 Remember Me


