– ಸುಧಾಕರ್‌ ವಿರುದ್ಧ ಜಾತಿ ನಿಂದನೆ ಕೇಸ್‌ಬೆಂಗಳೂರು: “ಯಲಹಂಕ ದೊಡ್ಡದೇನಲ್ಲ ನನಗೆ. ಬಾರಲೇ ಅಲ್ಲಿಗೆ ಬರೀನಿ ಬಾ. ಯಾವನ್ ನನ್ನತ್ರ ಗಾಂಚಾಲಿ, ಗೀಂಚಾಲಿ ನಡೆಯಲ್ಲ.ಎಲ್ಲದಕ್ಕೂ ರೆಡಿಯಾಗಿ ಬಂದಿರ್ತೀವಿ. ಸತ್ತೋಗಿರೋ ಪ್ರಾಪರ್ಟಿ ಉಳಿಸಿದ್ದೀನಿ. ಏ ಕೇಳಮ್ಮಾ ಸುಮ್ಮನೇ ಇಲ್ಲಿ” ಇದು ಸಿದ್ದರಾಮಯ್ಯ ಸರ್ಕಾರದ ಯೋಜನೆ ಮತ್ತು ಸಾಂಖ್ಯಿಕ ಖಾತೆ ಸಚಿವ ಡಿ.ಸುಧಾಕರ್‌ (D Sudhakar) ಅವರು ಮಹಿಳೆಗೆ ಅವಾಜ್‌ ಹಾಕಿದ ಪರಿ.ದೌರ್ಜನ್ಯ, ವಂಚನೆ, ಹಲ್ಲೆ ಮತ್ತು ಜಾತಿ ನಿಂದನೆ ಆರೋಪದಡಿ ಯೋಜನೆ ಮತ್ತು ಸಾಂಖ್ಯಿಕ ಖಾತೆ ಸಚಿವ ಡಿ.ಸುಧಾಕರ್‌ (Sudhkar) ಸೇರಿ ಮೂವರ ವಿರುದ್ಧ ಯಲಹಂಕ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾದ ಬೆನ್ನಲ್ಲೇ ಅವರು ಮಹಿಳಿಗೆ ಅವಾಜ್‌ ಹಾಕಿದ ವಿಡಿಯೋ ಲಭ್ಯವಾಗಿದೆ.  ಇದನ್ನೂ ಓದಿ: ಡಿಕೆ ಬ್ರದರ್ಸ್‌ಗೆ ಠಕ್ಕರ್‌ – ಲೋಕಸಭೆಗೆ ಹೆಚ್‌ಡಿಕೆ ಸ್ಪರ್ಧೆ? ಯಲಹಂಕ ನಿವಾಸಿ ಸುಬ್ಬಮ್ಮ ಎಂಬುವವರು ನೀಡಿದ ದೂರಿನ ಮೇರೆಗೆ ಸೆವೆನ್‌ ಹಿಲ್ಸ್‌ ಡೆವಲಪರ್ಸ್‌ ಮತ್ತು ಟ್ರೇಡ​ರ್ಸ್‌ ಪಾಲುದಾರರಾದ ಸಚಿವ ಡಿ.ಸುಧಾಕರ್‌, ಶ್ರೀನಿವಾಸ್‌, ಭಾಗ್ಯಮ್ಮ ಎಂಬುವವರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ದಾಖಲಾದ ಬೆನ್ನಲ್ಲೇ ಎಸಿಪಿ ಸುಧಾಕರ್‌ಗೆ ಕರೆ ಮಾಡಿದ್ದು ದಾಖಲಾತಿಯನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ.ದೂರಿನಲ್ಲಿ ಏನಿದೆ?
ಸೆವೆನ್‌ ಹಿಲ್ಸ್‌ ಡೆವಲಪರ್ಸ್‌ ಮತ್ತು ಟ್ರೇಡರ್ಸ್‌ನವರು (Seven Hills Developers and Traders) ಯಲಹಂಕ ಗ್ರಾಮದ ಸರ್ವೆ ನಂಬರ್‌ 108/1ರ 1.30 ಎಕರೆ ಜಮೀನನ್ನು ಮೋಸದಿಂದ ಕಬಳಿಕೆ ಮಾಡಿದ್ದಾರೆ. ಈ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿರುವಾಗ ಗುಂಪು ಕಟ್ಟಿಕೊಂಡು ಬಂದು ದೌರ್ಜನ್ಯ ಎಸೆಗಿದ್ದಾರೆ. ಮಹಿಳೆಯರನ್ನು ಕರೆದುಕೊಂಡು ಬಂದು ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
Web Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 




















Sign in to your account
Username or Email Address


Password

 Remember Me


