ಬೀದರ್: 58 ವರ್ಷಗಳಿಂದ ಪೊಲೀಸರ (Police) ಕೈಗೇ ಸಿಗದೇ ನ್ಯಾಯಾಲಯಕ್ಕೂ (Court) ಹಾಜರಾಗದೇ ತಲೆ ಮರೆಸಿಕೊಂಡಿದ್ದ ಎಮ್ಮೆ ಕಳ್ಳನನ್ನು ಬೀದರ್ ಪೊಲೀಸರು (Bidar Police) ಬಂಧಿಸಿದ್ದಾರೆ.ಮಹಾರಾಷ್ಟ್ರದ ಮೂಲದ ಕಿಶನ್ ಚಂದರ್ ಹಾಗೂ ಗಣಪತಿ ವಿಠಲ್ ವಾಗ್ಮೋರೆ 1965ರಲ್ಲಿ 2 ಎಮ್ಮೆ, 1 ಕರು ಕದ್ದಿದ್ದರು. ಎಮ್ಮೆ ಮಾಲೀಕ ಮರಳೀಧರಾವ್ ಕುಲಕರ್ಣಿ ಎಂಬುವರು ಭಾಲ್ಕಿಯ ಮಹಕರ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಇದನ್ನೂ ಓದಿ: ಎಂಜಿನಿಯರ್‌ ಮಿದುಳು ನಿಷ್ಕ್ರಿಯ –ಬೆಂಗಳೂರಿನಿಂದ ತಮಿಳುನಾಡಿಗೆ ಜೀವಂತ ಹೃದಯ ರವಾನೆ ಜಾಮೀನು ಸಿಕ್ಕಿದ ಬಳಿಕ ಇಬ್ಬರು ಕೋರ್ಟ್‌ಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದರು. ಸಮನ್ಸ್, ನೋಟಿಸ್, ವಾರೆಂಟ್ ನೀಡಿದ್ದರೂ ಆರೋಪಿಗಳು ಕ್ಯಾರೇ ಅಂದಿರಲಿಲ್ಲ. ಈ ಪೈಕಿ 2006 ರಲ್ಲಿ ಮೊದಲ ಆರೋಪಿ ಕಿಶನ್ ಚಂದರ್ ಮೃತ ಪಟ್ಟಿದ್ದು, ಈ ಪ್ರಕರಣದ ಎರಡನೇ ಆರೋಪಿ ಪತ್ತೆಗಾಗಿ ಎಸ್‌ಪಿ ಚೆನ್ನಬಸವಣ್ಣ ಲಂಗೋಟಿ ವಿಶೇಷ ತಂಡ ರಚನೆ ಮಾಡಿದ್ದರು.ಈಗ ಮಹಾರಾಷ್ಟ್ರದ ಲಾತೂರಿನ ಟಾಕಳಗಾಂವ್ ಗ್ರಾಮದಲ್ಲಿ ಬೀದರ್ ಪೊಲೀಸರು ಎರಡನೇ ಆರೋಪಿ ಗಣಪತಿ ವಿಠಲ್ ವಾಗ್ಮೋರೆಯನ್ನು ಬಂಧಿಸಿದ್ದಾರೆ.Web Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 




















Sign in to your account
Username or Email Address


Password

 Remember Me


