ಬೆಂಗಳೂರು: ಅಪರಾಧ ಪ್ರಕರಣಗಳ ಇತ್ಯರ್ಥಕ್ಕೆ ಹಣ ಬೇಕೆಂದು ಕಿಡ್ನ್ಯಾಪ್ ಮಾಡಿದ್ದ ಆರೋಪಿಗಳನ್ನು ಸಿ.ಕೆ.ಅಚ್ವುಕಟ್ಟು ಪೊಲೀಸರು ಬಂಧಿಸಿದ್ದಾರೆ. ರೌಡಿಶೀಟರ್‌ ಸೇರಿ ಮೂವರು ಜೈಲು ಪಾಲಾಗಿದ್ದಾರೆ.ಅರುಣ್ ಅಲಿಯಾಸ್ ಸುನಾಮಿ, ಕಿರಣ್ ಕುಮಾರ್, ಸೋಮಶೇಖರ್ ಬಂಧಿತ ಆರೋಪಿಗಳು. ಆಗಸ್ಟ್ 31 ರ ಬೆಳಗಿನ ಜಾವ 2:30 ರ ವೇಳೆಗೆ ಸಂದೀಪ್ ಕುಮಾರ್‌ ಎಂಬಾತನ ಕಿಡ್ನ್ಯಾಪ್‌ ಮಾಡಲಾಗಿತ್ತು. ಇದನ್ನೂ ಓದಿ: ದೇವದುರ್ಗ ಉಪಕಾರಾಗೃಹದಿಂದ ಪರಾರಿಯಾಗಿದ್ದ ವಿಚಾರಣಾಧೀನ ಕೈದಿ ಬಂಧನಬೆಂಗಳೂರಿನ ಇಟ್ಟಮಡುವಿನಿಂದ ಕಿಡ್ನ್ಯಾಪ್ ಮಾಡಿ ತಮಿಳುನಾಡಿಗೆ ಕರೆದೊಯ್ಯಲಾಗಿತ್ತು. ತಮಿಳುನಾಡಿನ ಡೆಂಕಣಿ ಕೋಣೆ ಫಾರಂ ಹೌಸ್‌ನಲ್ಲಿಟ್ಟು 50 ಲಕ್ಷ ರೂ. ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಸಿದ್ದರು.ಮರುದಿನ ಮತ್ತೊಂದು ಜಾಗಕ್ಕೆ ಶಿಫ್ಟ್ ಮಾಡುವ ವೇಳೆ ಅಪಹರಣಕಾರರಿಂದ ಯುವಕ ತಪ್ಪಿಸಿಕೊಂಡಿದ್ದ. ತಮಿಳುನಾಡಿನ ಅಚ್ಚಿತಾ ಪೊಲೀಸರ ಸಹಾಯ ಪಡೆದು ಬೆಂಗಳೂರಿಗೆ ಮರಳಿದ್ದ. ಸಂದೀಪ್ ದೂರಿನ ಹಿನ್ನೆಲೆ ನಾಲ್ವರು ಆರೋಪಿಗಳ ವಿರುದ್ಧ ಕೇಸ್ ದಾಖಲಾಗಿತ್ತು. ಇದನ್ನೂ ಓದಿ: ಕಾರವಾರ ಕಡಲ ತೀರಕ್ಕೆ ತೇಲಿಬಂದ ನೀಲಿ ತಿಮಿಂಗಿಲದ ಮೃತದೇಹ!ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರ ಕಾರ್ಯಾಚರಣೆ ವೇಳೆ ಮೂವರು ಆರೋಪಿಗಳು ಬಂಧಿತರಾಗಿದ್ದಾರೆ. ಮತ್ತೋರ್ವ ಆರೋಪಿಗಾಗಿ ಪೊಲೀಸರಿಂದ ತಲಾಶ್ ನಡೆಸುತ್ತಿದ್ದಾರೆ.Web Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 




















Sign in to your account
Username or Email Address


Password

 Remember Me


