ಬೆಂಗಳೂರು: ಭಾರತದ‌ ಭವಿಷ್ಯ ಬದಲಾವಣೆ ಮಾಡಿ ಅಂದರೆ ಭಾರತದ ಹೆಸರು ಬದಲಾವಣೆ ಮಾಡಲು ಬಿಜೆಪಿ ಹೊರಟಿದೆ ಅಂತ ಬಿಜೆಪಿ‌ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಕಿಡಿಕಾರಿದ್ದಾರೆ.ʻಇಂಡಿಯಾʼ (INDIA) ಹೆಸರು ಭಾರತ್ (ರಿಪಬ್ಲಿಕ್‌ ಆಫ್‌ ಭಾರತ್‌) (Republic Of Bharat) ಎಂದು ಬದಲಾವಣೆ ಮಾಡ್ತಿರೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದೊಂದು ವಾಟ್ಸಪ್‌ ವಿವಿಯಲ್ಲಿ ಬೆಳೆದು ಬಂದಿದ್ದು. ಇವರು ಇತಿಹಾಸ ತಿಳಿದುಕೊಂಡು ಬಂದಿಲ್ಲ. ಇಂಡಿಯಾ ಹೇಗೆ ಬಂತು ಅಂತ ಮೊದಲು ಇವರು ಇತಿಹಾಸ ತಿಳಿದುಕೊಳ್ಳಲಿ ಅಂತ ಬಿಜೆಪಿಗೆ ತಿರುಗೇಟು ಕೊಟ್ಟಿದ್ದಾರೆ. ‌ಇದನ್ನೂ ಓದಿ: ದಿಲ್ಲಿಯಲ್ಲಿ ಜಿ20 ಶೃಂಗಸಭೆ: ಯಾವ ನಾಯಕರು ಬರ್ತಾರೆ, ಯಾರು ಬರಲ್ಲ? – ಹಿಂದಿನ ಸಭೆಗಳಲ್ಲಿ ಏನೇನಾಗಿತ್ತು?
ಬಿಜೆಪಿಯವರು (BJP Leaders) ಮೊದಲು ರಸ್ತೆಗಳನ್ನ ಹೆಸರು ಚೇಂಜ್ ಮಾಡ್ತಿದ್ರು, ಈಗ ದೇಶದ ಹೆಸರು ಚೇಂಜ್ ಮಾಡ್ತಿದ್ದಾರೆ. ಮೊದಲು ದೇಶದ ಹಣೆಬರಹ ಚೇಂಜ್ ಮಾಡಿ. ಹಸಿವಿನಿಂದ ಎಷ್ಟು ಜ‌ನ ಸಾಯ್ತಿದ್ದಾರೆ? ಅದನ್ನ ಬದಲಾವಣೆ ಮಾಡಿ. ನಿಮ್ಮ ವರದಿಯಲ್ಲಿ ಕೋಟ್ಯಂತರ ಜನರು ಹಸಿವಿನಿಂದ ಸಾಯ್ತಿದ್ದಾರೆ. ಇದಕ್ಕೆ ಮೊದಲು ಪರಿಹಾರ ಕೊಡಿ ಅಂತ ಆಗ್ರಹಿಸಿದ್ದಾರೆ.ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ (Digital India) ಅಂತ ಹೇಳ್ತಿದ್ರು ಈಗ ಅದೆಲ್ಲ ಏನಾಯ್ತು? ದೇಶದ ಆರ್ಥಿಕ ಪರಿಸ್ಥಿತಿ ಏನಾಗಿದೆ? ಇವುಗಳ‌ ಬಗ್ಗೆ ಮೊದಲು ಮಾತಾಡಿ. ಇವೆಲ್ಲದರ ಕುರಿತು ಮೊದಲು‌ ಶ್ವೇತ ಪತ್ರ ಹೊರಡಿಸಲಿ ಅಂತ ಸವಾಲು ಹಾಕಿದ್ದಾರೆ. ‌ಇದನ್ನೂ ಓದಿ: ಬದಲಾಗುತ್ತಾ ದೇಶದ ಹೆಸರು – ‘ಇಂಡಿಯಾ’ ಬದಲಿಗೆ ‘ರಿಪಬ್ಲಿಕ್‌ ಆಫ್‌ ಭಾರತ್‌’ ಅಂತ ಮರುನಾಮಕರಣ?ಕಾಂಗ್ರೆಸ್‌ನವರು 70 ವರ್ಷ ಏನು ಮಾಡಿಲ್ಲ ಅಂತ ಹೇಳಿ ಕೊಂಡು ಬಂದ್ರು. 9 ವರ್ಷದಲ್ಲಿ ಎಲ್ಲಾ ಚೇಂಜ್ ಮಾಡ್ತೀವಿ ಅಂದ್ರು. ದೇಶದ ಹೆಸರು ಬಿಟ್ಟು ದೇಶದ ಪರಿಸ್ಥಿತಿ ಬದಲಾವಣೆ ಆಗಿಲ್ಲ. ಈಗ ಹೆಸರು ಬದಲಾವಣೆ ‌ಮಾಡ್ತಿದ್ದಾರೆ. ಅವರ ಕೈಯಲ್ಲಿ ಅಧಿಕಾರ ಇದೆ ಮಾಡಲಿ ಅಂತ ಭಾರತ್ ಹೆಸರಿಗೆ ಪ್ರಿಯಾಂಕ್ ಖರ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.Web Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 




















Sign in to your account
Username or Email Address


Password

 Remember Me


