ಬೆಂಗಳೂರು: ರಾಜ್ಯದಲ್ಲಿ ಮತ್ತೆ ಆಪರೇಷನ್ ಹಸ್ತದ ಸದ್ದು ಜೋರಾಗ್ತಿದೆ. ನಿನ್ನೆಯಷ್ಟೇ ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ (Poornima Shrinivas) ನಿವಾಸಕ್ಕೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಭೇಟಿ ಕೊಟ್ಟು ಕೃಷ್ಣಜನ್ಮಾಷ್ಟಮಿ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಈ ಬೆನ್ನಲ್ಲೇ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ (Shivaram Hebbar), ಡಿಕೆಶಿ ಅವರನ್ನ ಭೇಟಿ ಮಾಡಿ 30 ನಿಮಿಷಗಳ ಕಾಲ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ.ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಕುಮಾರಕೃಪ ಸರ್ಕಾರಿ ಅತಿಥಿ ಗೃಹದಲ್ಲಿ ಡಿ.ಕೆ ಶಿವಕುಮಾರ್ ಅವರನ್ನ ಭೇಟಿ ಮಾಡಿ 30 ನಿಮಿಷಗಳ ಮಾತುಕತೆ ನಡೆಸಿದ್ದಾರೆ. ಇಲಾಖೆ ವಿಚಾರವಾಗಿ ಚರ್ಚಿಸಬೇಕು ಅಂತಾ ಡಿಶಿ ಅವರನ್ನ ಭೇಟಿ ಮಾಡಿರುವುದಾಗಿ ಹೇಳಿದ್ದಾರೆ.ನಿನ್ನೆ ಸಂಜೆ ಮಾಜಿ ಸಂಸದ ಬಿಜೆಪಿ ನಾಯಕ ಎಲ್.ಆರ್ ಶಿವರಾಮೇಗೌಡ (LR ShivarameGowda) ಸಹ ಡಿ.ಕೆ ಶಿವಕುಮಾರ್ ಅವರನ್ನ ಭೇಟಿ ಮಾಡಿದ್ದಾರೆ. ಇದರಿಂದ ರಾಜ್ಯ ರಾಜಕೀಯದಲ್ಲಿ ದೊಡ್ಡಮಟ್ಟದ ಆಪರೇಷನ್ ನಡೆಯುತ್ತೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಇದನ್ನೂ ಓದಿ: ಮಾಜಿ ಸಚಿವ ವಿಶ್ವನಾಥ್ ಕಾಂಗ್ರೆಸ್ ಸೇರದಂತೆ ಮನವೊಲಿಸಲು ನಾನು ಮುಂದಾಳತ್ವ ವಹಿಸಲ್ಲ: ಹೆಬ್ಬಾರ್ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮನೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಪೂಜೆಗೆ ಪಾಲ್ಗೊಂಡಿದ್ದ ಡಿಕೆಶಿ, ನಮ್ದು ಆಪರೇಷನ್ ಅಲ್ಲ.. ಕೋ ಆಪರೇಷನ್ ಅಂತ ಹೇಳಿದ್ದರು. ಇನ್ನು ಕಾಂಗ್ರೆಸ್‌ನಿಂದ ಆಫರ್ ಇದೆ.. ಆದ್ರೆ, ಬಿಜೆಪಿ ಬಿಡೋ ಯೋಚನೆ ಮಾಡಿಲ್ಲ ಎಂದು ಪೂರ್ಣಿಮಾ ಶ್ರೀನಿವಾಸ್ ಹೇಳಿದ್ದರು. ಇದನ್ನೂ ಓದಿ: `ಕೈ’ ಹಿಡಿಯಲು ಮುಂದಾದ್ರಾ BJP ಶಾಸಕ – ರಾತ್ರಿ ರಹಸ್ಯ ಸಭೆ ಬಳಿಕ ಶಿವರಾಮ್‌ ಹೆಬ್ಬಾರ್ ಹೇಳಿದ್ದೇನು?Web Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 




















Sign in to your account
Username or Email Address


Password

 Remember Me


