ಬೆಂಗಳೂರು: ರಾಯಚೂರು (Raichur) ನಗರದಲ್ಲಿ ಟ್ರಕ್ ಮತ್ತು ಲಾರಿಗಳ ಸಂಚಾರವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಟ್ರಕ್ ಟರ್ಮಿನಲ್ (Truck Terminal) ಅಗತ್ಯವಿದ್ದು, ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಅಗತ್ಯ ಜಾಗವನ್ನು ಶೀಘ್ರ ಗುರುತಿಸುವಂತೆ  ಸಣ್ಣ ನೀರಾವರಿ,ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್ ಬೋಸರಾಜು (N.S.Boseraju) ಅಧಿಕಾರಿಗಳಿಗೆ ಸೂಚನೆ ನೀಡಿದರು.ವಿಕಾಸಸೌಧದಲ್ಲಿ ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ ಲಿಮಿಟೆಡ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಉದ್ದೇಶಿತ ಯೋಜನೆಯ ಶೀಘ್ರ ಅನುಷ್ಠಾನಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಇದನ್ನೂ ಓದಿ: ಸೆ.18-22 ವಿಶೇಷ ಸಂಸತ್ ಅಧಿವೇಶನ- ಪ್ರಮುಖ 9 ವಿಷಯಗಳ ಚರ್ಚೆಗೆ ಸೋನಿಯಾ ಗಾಂಧಿ ಆಗ್ರಹಟ್ರಕ್ ಟರ್ಮಿನಲ್ ನಗರದ ಹೊರಭಾಗದಲ್ಲಿ ನಿರ್ಮಾಣವಾದರೆ ಸೂಕ್ತ. ಈ ಟರ್ಮಿನಲ್ ನಿರ್ಮಾಣಕ್ಕೆ ಸುಮಾರು 10 ಎಕರೆ ಜಾಗದ ಅವಶ್ಯಕತೆಯಿದೆ. 10 ಎಕರೆ ಜಾಗದಲ್ಲಿ ನಿರ್ಮಿಸಲಾಗುವ ಈ ಟ್ರಕ್ ಟರ್ಮಿನಲ್‌ನಲ್ಲಿ ಚಾಲಕರ ವಿಶ್ರಾಂತಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು. ಇದನ್ನೂ ಓದಿ: ಸೂರ್ಯ, ಚಂದ್ರ, ಭೂಮಿ ಯಾವಾಗ ಹುಟ್ಟಿದೆ ಅಂತ ಕೇಳೋಕೆ ಆಗುತ್ತಾ? – ಪರಂ ವಿರುದ್ಧ ಮುತಾಲಿಕ್ ಕಿಡಿರಾಯಚೂರು ನಗರದ ಹೊರಭಾಗದಲ್ಲಿ ಅಗತ್ಯ ಭೂಮಿಯನ್ನು ಶೀಘ್ರವಾಗಿ ಗುರುತಿಸುವಂತೆ ಹಾಗೂ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡುವಂತೆ ಸಚಿವರು ರಾಯಚೂರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ಇದನ್ನೂ ಓದಿ: ಶಾಸಕರ ಅನಗತ್ಯ ಪತ್ರ ವ್ಯವಹಾರಕ್ಕೆ ಸಿಎಂ ಬ್ರೇಕ್?Web Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 




















Sign in to your account
Username or Email Address


Password

 Remember Me


