ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara 2024) ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು 2ನೇ ತಂಡದ 5 ಆನೆಗಳು ಗುರುವಾರ ಕಾಡಿನಿಂದ ನಾಡಿಗೆ ಹೊರಟಿವೆ.ಈ ಬಾರಿಯೂ ಅಭಿಮನ್ಯು ಕ್ಯಾಪ್ಟನ್‌ ಆಗಿದ್ದು, ನಾಡದೇವಿ ಚಾಮುಂಡೇಶ್ವರಿ ವಿಗ್ರಹವುಳ್ಳ ಚಿನ್ನದ ಅಂಬಾರಿ ಹೊರಲಿದ್ದಾನೆ. ಅಭಿಮನ್ಯು (Abhimanyu Elephant) ತಂಡಕ್ಕೆ ಗುರುವಾರ (ಇಂದು) ಮಹೇಂದ್ರ, ಸುಗ್ರೀವ, ಹಿರಣ್ಯ, ಲಕ್ಷ್ಮಿ ಮತ್ತು ಪ್ರಶಾಂತ ಆನೆಗಳು ಸೇರ್ಪಡೆಯಾಗಲಿವೆ. ಇದನ್ನೂ ಓದಿ: ರಾಜಮನೆತನ, ಸರ್ಕಾರ ಮಧ್ಯೆ ನಿಲ್ಲದ ಚಾಮುಂಡಿ ಪ್ರಾಧಿಕಾರ ಸಂಘರ್ಷ – ಮೊದಲ ಸಭೆಯಲ್ಲಿ ಏನೇನು ಚರ್ಚೆಯಾಗಿದೆ?ವೀರನಹೊಸಹಳ್ಳಿಯಲ್ಲಿ ಆ.21ರಂದು ವಿದ್ಯುಕ್ತವಾಗಿ ಆನೆಗಳಿಗೆ ಪೂಜೆ ಸಲ್ಲಿಸಿ ಗಜಪಯಣಕ್ಕೆ ಚಾಲನೆ ನೀಡಲಾಗಿತ್ತು. ಮೊದಲ ತಂಡದಲ್ಲಿ ಅಭಿಮನ್ಯು, ಗೋಪಿ, ಭೀಮ, ಧನಂಜಯ, ರೋಹಿತ, ಏಕಲವ್ಯ ಕಂಜನ್, ವರಲಕ್ಷ್ಮಿ ಮತ್ತು ದೊಡ್ಡ ಹರವೆ ಆನೆ ಶಿಬಿರದ ಲಕ್ಷ್ಮಿ ಆನೆಗಳು ಮೈಸೂರಿಗೆ ಆಗಮಿಸಿದ್ದವು. ಇದನ್ನೂ ಓದಿ: ಮುಡಾ ಸಂಕಷ್ಟದ ಹೊತ್ತಲ್ಲೇ ನಾಡದೇವತೆ ಚಾಮುಂಡೇಶ್ವರಿ ದರ್ಶನ ಪಡೆದ ಸಿಎಂಸೆ.5ರ ಸಂಜೆ ಎರಡನೇ ಹಂತದಲ್ಲಿ 5 ಆನೆಗಳು ಮೈಸೂರು ಅರಮನೆ ಆವರಣಕ್ಕೆ ಆಗಮಿಸಲಿದ್ದು, ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಸ್ವಾಗತ ಕೋರಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮುಡಾ ಹಿಂದಿನ ಆಯುಕ್ತರ ಅಮಾನತು ಆದೇಶವೇ ಸರ್ಕಾರಕ್ಕೆ ಸುಸೈಡ್ ನೋಟ್: ಶಾಸಕ ಶ್ರೀವತ್ಸಗಜಪಡೆಗೆ ಮರಳು ಮೂಟೆ ತಾಲೀಮು: 
ಈಗಾಗಲೆ ಅರಮನೆ ಅಂಗಳದಲ್ಲಿರುವ ಮೊದಲ ಬ್ಯಾಚ್‌ನ ಆನೆಗಳಿಗೆ ಮರಳು ಮೂಟೆ ಹೊರುವ ತಾಲೀಮು ನೀಡಲಾಗುತ್ತಿದೆ. ಅರಮನೆಯಿಂದ ಸಯ್ಯಾಜೀರಾವ್ ರಸ್ತೆ, ಆಯುವೇರ್ದಿಕ್ ವೃತ್ತದ ಮೂಲಕ ಜಂಬೂ ಬಜಾರ್ ತಲುಪಿ ಹೈವೇ ಸರ್ಕಲ್ ಮೂಲಕ ದಸರಾ ಗಜಪಡೆ ಬನ್ನಿಮಂಟಪ ತಲುಪಲಿವೆ. ಅರಮನೆಯಿಂದ ಬನ್ನಿಮಂಟಪದವರೆಗೆ 5 ಕಿ.ಮೀ ತಾಲೀಮು ನಡೆಯುತ್ತಿದೆ.Sign in to your account
Username or Email Address


Password

 Remember Me


