ದಾವಣಗೆರೆ: ಸತತ ಮಳೆಗೆ ಗೋಡೆ ಕುಸಿದು ವೃದ್ಧ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚನ್ನಗಿರಿ (Channagiri) ತಾಲೂಕಿನ ಸಂತೆಬೆನ್ನೂರಿನಲ್ಲಿ (Santhebennur) ನಡೆದಿದೆ.ಮೃತ ವೃದ್ಧನನ್ನು ಸಂತೆಬೆನ್ನೂರು ನಿವಾಸಿ ಕುಳಗಟ್ಟೆ ಬಸವರಾಜಪ್ಪ (81) ಎಂದು ಗುರುತಿಸಲಾಗಿದೆ. ಪುಷ್ಕರಣಿ ಬೀದಿಯಲ್ಲಿದ್ದ ಮನೆಯಲ್ಲಿ ಗೋಡೆ ಕುಸಿದು ಸಾವನ್ನಪ್ಪಿದ್ದಾರೆ.ಇದನ್ನೂ ಓದಿ: ಇನ್ನೂ ರಿಟ್ರೀವ್ ಆಗಿಲ್ಲ ದರ್ಶನ್, ಪವಿತ್ರಾಗೌಡ ಮೊಬೈಲ್!ರಾತ್ರಿ ಸತತ ಮಳೆ ಸುರಿಯುತ್ತಿದ್ದು, ಗೋಡೆ ಒಂದು ಕಡೆ ವಾಲುತ್ತಿತ್ತು. ಈ ವೇಳೆ ಮನೆಯಲ್ಲಿದ್ದ ಬಸವರಾಜಪ್ಪ, ಆತನ ಮಗ ಹಾಗೂ ಸೊಸೆ ಮನೆಯಿಂದ ಹೊರಬರಲು ಯತ್ನಿಸಿದ್ದಾರೆ. ಆತನ ಮಗ ಹಾಗೂ ಸೊಸೆ ಮನೆಯಿಂದ ಹೊರಗೆ ಬಂದಿದ್ದಾರೆ. ಆದರೆ ಮನೆಯಿಂದ ಹೊರಬರುವ ಪ್ರಯತ್ನದಲ್ಲಿದ್ದ ವೃದ್ಧ ಬಸವರಾಜಪ್ಪನ ಮೇಲೆ ಗೋಡೆ ಕುಸಿದಿದೆ. ಗೋಡೆ ಕುಸಿದು ತೀವ್ರ ಗಾಯಗೊಂಡು ಸಾವನ್ನಪ್ಪಿದ್ದಾರೆ.ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಚನ್ನಗಿರಿ ತಹಶೀಲ್ದಾರರಾದ ರುಕ್ಮಿಣಿಬಾಯಿ ಭೇಟಿ ನೀಡಿದ್ದು, ಮೃತರ ಕುಟುಂಬಕ್ಕೆ ಐದು ಲಕ್ಷ ರೂ. ಚೆಕ್‌ನ್ನು ಪರಿಹಾರವಾಗಿ ನೀಡಿದ್ದಾರೆ. ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: Women’s T20 World Cup; ಭಾರತ vs ಪಾಕಿಸ್ತಾನ ಫೈಟ್‌ – ಟೀಂ ಇಂಡಿಯಾಗೆ ಇಂದು ನಿರ್ಣಾಯಕ ಪಂದ್ಯSign in to your account
Username or Email Address


Password

 Remember Me


