ಬೆಂಗಳೂರು: ಐಎನ್‌ಡಿಐಎ (INDIA) ಒಕ್ಕೂಟದವರು ಎಷ್ಟೇ ಪ್ರಯತ್ನ ಪಟ್ಟರೂ, ಏನೇ ಮುಖವಾಡ ಧರಿಸಿದರೂ ಅವರ ರಾಷ್ಟ್ರವಿರೋಧಿ ಮಾನಸಿಕತೆ ಉದಯನಿಧಿ ಸ್ಟಾಲಿನ್ (Uday Stalin) ಮೂಲಕ ಬಹಿರಂಗವಾಗಿದೆ ಎಂದು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ, ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಕಿಡಿ ಕಾರಿದ್ದಾರೆ.ಸಹಸ್ರಾರು ವರ್ಷಗಳಿಂದ ಈ ರಾಷ್ಟ್ರದ ಬುನಾದಿಯಾಗಿರುವ ನಮ್ಮ ಸನಾತನ ಸಂಸ್ಕೃತಿಯನ್ನು ನಿರ್ಮೂಲನೆ ಮಾಡುತ್ತಾರಂತೆ. ಸನಾತನ ಧರ್ಮವನ್ನು ಅಳಿಸುವ ಪ್ರಯತ್ನ ಕಳೆದ 1 ಸಾವಿರ ವರ್ಷದಿಂದಲೂ ನಡೆಯುತ್ತಲೇ ಬಂದಿದೆ. ಉದಯ್ ಸ್ಟಾಲಿನ್ ರ ಈ ಮಾತು ಅದೇ ವಿಕೃತ ಮನಸ್ಥಿತಿಯನ್ನು ದರ್ಶಿಸುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ (Social Media) ಬರೆದುಕೊಂಡಿದ್ದಾರೆ.ಸಹಸ್ರಾರು ವರ್ಷಗಳಿಂದ ಈ ರಾಷ್ಟ್ರದ ಬುನಾದಿಯಾಗಿರುವ ನಮ್ಮ ಸನಾತನ ಸಂಸ್ಕೃತಿಯನ್ನು ನಿರ್ಮೂಲನೆ ಮಾಡುತ್ತಾರಂತೆ !!ಸನಾತನ ಧರ್ಮವನ್ನು ಅಳಿಸುವ ಪ್ರಯತ್ನ ಕಳೆದ 1 ಸಾವಿರ ವರ್ಷದಿಂದಲೂ ನಡೆಯುತ್ತಲೇ ಬಂದಿದೆ.ಉದಯ್ ಸ್ಟಾಲಿನ್ ರ ಈ ಮಾತು ಅದೇ ವಿಕೃತ ಮನಸ್ಥಿತಿಯನ್ನು ದರ್ಶಿಸುತ್ತದೆ.I.N.D.I.Alliance ನವರು ಎಷ್ಟೇ ಪ್ರಯತ್ನ ಪಟ್ಟರೂ,… pic.twitter.com/0n4C2jYbOw— Tejasvi Surya (@Tejasvi_Surya) September 3, 2023ಇಂತಹ ರಾಷ್ಟ್ರ ವಿರೋಧಿ ಶಕ್ತಿಗಳಿಗೆ ತಕ್ಕ ಪಾಠ ಕಲಿಸುವ ಜವಾಬ್ದಾರಿ ಪ್ರತಿಯೊಬ್ಬ ಭಾರತೀಯನ ಮೇಲಿದೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ. ಇದನ್ನೂ ಓದಿ: ಕೆಎಲ್ ರಾಹುಲ್ ಫಿಟ್ – ಟೀಂ ಇಂಡಿಯಾದಿಂದ ಯಾರು ಔಟ್?ಸನಾತನನ ಧರ್ಮವು (Sanatan Dharma) ಡೆಂಗ್ಯೂ, ಮಲೇರಿಯಾ ಇದ್ದಂತೆ. ಅದನ್ನು ನಿರ್ಮೂಲನೆ ಮಾಡಬೇಕೇ ಹೊರತು, ವಿರೋಧಿಸಬಾರದು ಎಂದು ತಮಿಳುನಾಡು (Tamil Nadu) ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (M.K.Stalin) ಅವರ ಪುತ್ರ ಉದಯನಿಧಿ ಸ್ಟಾಲಿನ್ ನೀಡಿದ ಹೇಳಿಕೆ ವಿರುದ್ಧ ಬಿಜೆಪಿ ನಾಐಕರು ಮುಗಿಬಿದ್ದು ಟೀಕಿಸುತ್ತಿದ್ದಾರೆ. Web Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 




















Sign in to your account
Username or Email Address


Password

 Remember Me


